ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಾಫಿ ಯುಗ ಅಂತ್ಯ, ಸೆಕ್ಸ್ ಸೀಕ್ರೇಟ್ಸ್ ಜೀವಂತ

By Mahesh
|
Google Oneindia Kannada News

Muammar Gaddafi
ಟ್ರಿಪೋಲಿ, ಅ.21: ವಿಚಿತ್ರ, ವಿಕ್ಷಿಪ್ತ ಮನೋಭಾವದ ಕುತೂಹಲಕಾರಿ ಸರ್ವಾಧಿಕಾರಿ ಮುಹಮ್ಮರ್ ಗಡಾಫಿ ಯುಗ ಅಂತ್ಯವಾಗಿದೆ. ಲಿಬಿಯಾದಲ್ಲಿ ಸೀಕ್ರೇಟ್ ಆಗಿ ಗಡಾಫಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ.

ಇದರ ಬೆನ್ನ ಹಿಂದೆ ಗಡಾಫಿ ಕೊಂದವರು ಯಾರು, ಗಡಾಫಿ ಸೆಕ್ಸ್ ಸೀಕ್ರೇಟ್ ಗಳ ಬಗ್ಗೆ ನಾನಾ ಕಥೆಗಳು ಹುಟ್ಟಿಕೊಳ್ಳುತ್ತಿದೆ.

42 ವರ್ಷಗಳ ಕಾಲ ಲಿಬಿಯಾ ದೇಶವನ್ನು ಅಳಿದ ಗಡಾಫಿ ಒಂದು ನೋಟಕ್ಕೆ ತಲೆಗಳನ್ನು ಉರುಳಿಸುವ ಶಕ್ತಿಯಿತ್ತು. ಆತನ ಬೆಂಗಾವಲಿಗೆ ಇದ್ದ ಸಶಸ್ತ್ರ ಪಡೆಯಲ್ಲೇ ಸ್ತ್ರೀಶಕ್ತಿಗೆ ತುಂಬಿತ್ತು.

ಅವನ ಬೆಂಗಾವಲಿನ ಪಡೆಯಲ್ಲಿದ್ದ ಸುಂದರ ಕನ್ಯೆಯರನ್ನು 'ಕಿಲ್ಲಿಂಗ್ ಮೆಷಿನ್' ಎಂದೇ ಕರೆಯಲಾಗುತ್ತಿತ್ತು. ಗಡಾಫಿಗೆ ತೆಳ್ಳಗೆ ಬೆಳ್ಳಗೆ ಇರುವ ನರ್ಸ್ ಗಳ ಮೋಹ ಅಂಟಿಕೊಂಡಿತ್ತು. ಇಂಗ್ಲೀಷ್ ನರ್ಸ್, ಲೇಡಿ ಬಾಡಿಗಾರ್ಡ್ ನಡುವೆ ಈ ಸ್ತ್ರೀಲೋಲ ಸುತ್ತುತ್ತಿದ್ದರೆ ಅವನ ಶತ್ರುಗಳು ಹೊಟ್ಟೆಊರಿಯಿಂದಲೇ ಸಾಯುತ್ತಿದ್ದರಂತೆ.

ಗಡಾಫಿ ತೆವಲುಗಳ ರಾಜ: ನರ್ಸ್ ಗೌಲೀನಾ ಕೊಲೊನಿತ್ಸಕಾ ಎಂಬುವಳು ಗಡ್ಡಾಫಿಯ ಬಹುಕಾಲದ ಮನದನ್ನೆಯಾಗಿದ್ದಳು. ಲೇಡಿ ಬಾಡಿಗಾರ್ಡ್ ಗಳ ನಡುವೆ ನರ್ಸ್ ಗೌಲೀನಾ ಸದಾ ಇರುತ್ತಿದ್ದಳು.

ಮೇ 2011ರಲ್ಲಿ ಗೌಲೀನಾಳನ್ನು ಉಪಪತ್ನಿಯಾಗಿ ಗಡಾಫಿ ಇಟ್ಟುಕೊಂಡಿರುವ ಬಗ್ಗೆ ಪುಖಾರು ಎದ್ದಿತ್ತು.

ಗಡಾಫಿಗೆ ನರ್ಸ್ ಮೇಲೆ ಎಷ್ಟರಮಟ್ಟಿಗೆ ಮೋಹ ಬೆಳೆದಿತ್ತೆಂದರೆ ಅವಳ ಡ್ರೆಸ್ ಅನ್ನು ಧರಿಸಿ ಸಂಭೋಗ ಕ್ರಿಯೆಗೆ ತೊಡಗುತ್ತಿದ್ದನಂತೆ. ಅದು ಬೇಸ್ ಮೆಂಟ್ ಅಥವಾ ಅಂಡರ್ ಗ್ರೌಂಡ್ ಕಟ್ಟಡದಲ್ಲಿ ಮಾತ್ರ ಆತ ದೇಹ ಸಂಪರ್ಕದ ಕಾರ್ಯಕ್ರಮ ಜರುಗಿಸುತ್ತಿದ್ದ.

ಅನೇಕ ಫೋಬಿಯಾದಿಂದ ಬಳಲುತ್ತಿದ್ದ ಗಡ್ಡಾಫಿಗೆ ನೀರನ ಮೇಲೆ ವಿಮಾನದಲ್ಲಿ ಹಾರುವುದೆಂದರೆ ಗಡಗಡ ಎಂದು ನಡುಗುತ್ತಿದ್ದ. ಎತ್ತರದ ಕಟ್ಟಡದಲ್ಲಿರುವುದಕ್ಕಿಂತ ನೆಲ ಅಂತಸ್ತಿನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ.

ಇಟಲಿಯ ಪ್ರತಿಷ್ಠಿತ ಜ್ಯುವೆಂಟಸ್ ಫುಟ್‌ಬಾಲ್ ಕ್ಲಬ್‌ನಲ್ಲಿ ಅಪಾರ ಷೇರುಗಳನ್ನು ಹೊಂದಿದ್ದಾನೆ. ಜಗತ್ತಿನ ಹಲವು ದೇಶಗಳಲ್ಲಿ ಭಾರಿ ಆಸ್ತಿಪಾಸ್ತಿಗಳಿವೆ. ಗಡಾಫಿಯ ಇಬ್ಬರು ಪತ್ನಿಯರ ಎಂಟು ಮಂದಿ ಮಕ್ಕಳು ಹಲವು ದೇಶಗಳಲ್ಲಿ ಉನ್ನತ ಅಧಿಕಾರದಲ್ಲಿದ್ದಾರೆ. ಗಡಾಫಿ ಕೊನೆಯಾದರೂ ಆತನ ಬಗೆಗಿನ ಕಥೆಗಳಿಗೆ ಅಂತ್ಯವಿಲ್ಲ.

English summary
Former Libyan leader Muammar Gaddafi killed on thursday(Oct.20) as Libya plans secret burial, mystery over his death sex matter are revealed by Ukrainian nurse Galyna Kolotnytska.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X