ಅತ್ಯಾಚಾರಕ್ಕೆ ಅಡ್ಡಿಪಡಿಸಿದ ಬಾಲಕಿಯನ್ನು ಯದ್ವಾತದ್ವಾ ಬಡಿದರು
ನವದೆಹಲಿ,
ಅ. 17: ನಾಲ್ವರು ಯುವಕರು ಹದಿಹರೆಯದ ಬಾಲಕಿಯ ಮೇಲೆ ಶನಿವಾರ ಸಂಜೆ ದೆಹಲಿ ಹೊರವಲಯದಲ್ಲಿರುವ ಅಮನ್ ವಿಹಾರ್ ಮಾರುಕಟ್ಟೆ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಅತ್ಯಾಚಾರಕ್ಕೆ ಪಯತ್ನಿಸುವಾಗ ಬಾಲಕಿ ಜೋರಾಗಿ ಕಿರುಚಿಕೊಂಡು ಪ್ರತಿರೋಧವೊಡ್ಡಿದ್ದರಿಂದ ಕುಪಿತರಾದ ದುರುಳ ಯುವಕರು ಆಕೆಯನ್ನು ದನಕ್ಕೆ ಬಡಿದಂತೆ ಬಡಿದಿದ್ದಾರೆ. id="toptextpromo">ಬಾಲಕಿಯ
ಚೀರಾಟವನ್ನು ಕೇಳಿ ಸ್ಥಳದಲ್ಲಿ ಜನ ಸೇರುವ ವೇಳೆಗೆ ಬಾಲಕಿ ಸ್ಮೃತಿ ತಪ್ಪಿಬಿದ್ದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳು ಪರಾರಿಯಾಗಿದ್ದು, ಒಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಾಲಕಿ
ಮಾರುಕಟ್ಟೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಆಕೆನ್ನು ಅಪಹರಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ನಿರ್ಜನ ಪ್ರದೇಶಕ್ಕೆ ಬಾಲಕಿಯನ್ನು ಹೊತ್ತೊಯ್ದ ಪಾಪಿಗಳು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಆದರೆ ಆಕೆ ಅದನ್ನು ವಿರೋಧಿಸಿದಾಗ ಲೈಂಗಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿದೆ.











Click it and Unblock the Notifications