ಕಾಶ್ಮೀರ ಕುರಿತಂತೆ ಪ್ರಶಾಂತ್ ಭೂಷಣ್ ಹೇಳಿದ್ದೇನು?

ಈ ಹೇಳಿಕೆ ನೀಡಿದ್ದಕ್ಕಾಗಿ ಅಣ್ಣಾ ಹಜಾರೆ ಜೊತೆ ಲೋಕಪಾಲ ಮಸೂದೆ ಮಂಡನೆಗಾಗಿ ಹೋರಾಟ ನಡೆಸಿರುವ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಅವರ ಮೇಲೆ ಕಾಶ್ಮೀರದಲ್ಲಿರುವ ಭಗತ್ ಸಿಂಗ್ ಕ್ರಾಂತಿ ಸೇನೆಯ ಯುವಕರು ಮನಬಂದಂತೆ ಥಳಿಸಿದ್ದಾರೆ.
ಹಲ್ಲೆ ಮಾಡಿದ ಭಗತ್ ಸಿಂಗ್ ಕ್ರಾಂತಿ ಸೇನೆಯ ಅರುಣ್ ಕುಮಾರ್ ನನ್ನು ಬಂಧಿಸಲಾಗಿದೆ. ವಿಷ್ಣು ಗುಪ್ತಾ ಮತ್ತು ತೇಜ್ ಪಾಲ್ ಸಿಂಹ ಎಂಬಿಬ್ಬರು ತಪ್ಪಿಸಿಕೊಂಡಿದ್ದಾರೆ. ಪ್ರಶಾಂತ್ ಅವರ ಕಚೇರಿಗೆ ನುಗ್ಗಿ, ಕಾಲರ್ ಹಿಡಿದು ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಬಂಧಿತನಾದ ಅರುಣ್ ನನ್ನು ಪ್ರಶಾಂತ್ ಸಹೋದ್ಯೋಗಿಗಳು ಹೊಡೆದಿದ್ದಾರೆ.
ಪ್ರಶಾಂತ್ ಮೇಲೆ ನಡೆದ ಅಮಾನುಷ ಹಲ್ಲೆಗಾಗಿ ಎಲ್ಲ ರಾಜಕೀಯ ಪಕ್ಷಗಳಿಂದ ಖಂಡನೆ ವ್ಯಕ್ತವಾಗಿದೆ. ಈ ಸೇನೆಗೂ ಶ್ರೀರಾಮಸೇನೆಗೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ. [ವಿಡಿಯೋ]












Click it and Unblock the Notifications