ಪ್ರಶಾಂತ್ ಭೂಷಣ್ ಮೇಲೆ ಯುವಕರ ಹಲ್ಲೆ
ನವದೆಹಲಿ,
ಅ. 12 : ಜಮ್ಮು ಕಾಶ್ಮೀರ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಲೋಕಪಾಲ ಮಸೂದೆ ಕರಡು ಸಮಿತಿಯಲ್ಲಿರುವ ಪ್ರಶಾಂತ್ ಭೂಷಣ್ ಅವರ ಕಪಾಳಕ್ಕೆ ಯುವಕರಿಬ್ಬರು ಬಾರಿಸಿರುವ ಘಟನೆ ಬುಧವಾರ ನಡೆದಿದೆ. id="toptextpromo">ಜನ
ಲೋಕಪಾಲ ಮಸೂದೆಗಾಗಿ ಅಣ್ಣಾ ಹಜಾರೆ ಜೊತೆ ಹೋರಾಡುತ್ತಿರುವ ಪ್ರಶಾಂತ್ ಭೂಷಣ್ ಅವರ ಚೇಂಬರಿಗೆ ನುಗ್ಗಿದ ಯುವಕರು ಪ್ರಶಾಂತ್ ಅವರನ್ನು ಮನಸೋಇಚ್ಛೆ ಥಳಿಸಿದ್ದಾರೆ. ಅವರ ಕಾಲರನ್ನು ಹಿಡಿದು ಎಳೆದಾಡಿ ಕಪಾಳಕ್ಕೆ ಹೊಡೆದು ದೇಹದ ಮೇಲೆಲ್ಲ ಹಲ್ಲೆ ಮಾಡಿದ್ದಾರೆ. ನಂತರ ಕಾಲಿನಿಂದಲೂ ಒದ್ದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಜಮ್ಮು
ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಬೇಕು ಎಂಬ ಹೇಳಿಕೆಯನ್ನು ವಕೀಲರಾಗಿರುವ ಪ್ರಶಾಂತ್ ಭೂಷಣ್ ಅವರು ನೀಡಿದ್ದರು ಎನ್ನಲಾಗಿದೆ. ಇಬ್ಬರಲ್ಲಿ ಒಬ್ಬರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ. ಥಳಿಸಿದವರ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ಪ್ರಶಾಂತ್ ಹೇಳಿದ್ದಾರೆ. [ವಿಡಿಯೋ]











Click it and Unblock the Notifications