ಅನುಸೂಯ ಹತ್ಯೆಗೆ ಅಪಾರ್ಟ್‌ಮೆಂಟ್ ಮಾಲೀಕರ ಹೊಣೆಗೇಡಿತನವೂ ಕಾರಣ

ಆದರೆ ಅದು ಜಾರಿಗೆ ಬಂದ ಯಾವುದೇ ಕುರುಹು ಕಾಣುತ್ತಿಲ್ಲ. ಶೇಷಾದ್ರಿಪುರಂನಲ್ಲಿ ಎಸ್‌ಬಿಎಂ ಕ್ಯಾಶಿಯರ್ ಅನುಸೂಯ ಹತ್ಯೆ ಪ್ರಕರಣವನ್ನು ಗಮನಿಸಿದಾಗ ಈ ಅಂಶ ಸಾಬೀತಾಗುತ್ತದೆ. ಉದ್ಯೋಗಿಗಳ ಇಡೀ ಜಾತಕ ಹಾಗಿರಲಿ ಪೋಲೋ ಗಾರ್ಡ್ ಅಪಾರ್ಟ್‌ಮೆಂಟ್ ಮಾಲೀಕರಿಗೆ ತಮ್ಮ ಕಾವಲುಗಾರ ಆಶ್ರಫ್ ಖಾನ್ ನ ನಿಜ ನಾಮವೇ ತಿಳಿದಿಲ್ಲ. ಅಸಲಿಗೆ ಈ ಪಾತಕಿಯ ಹೆಸರು ಅಸೋಕ್ ಅಂತೆ (Asock)!
ಇನ್ನು, ಅಪಾರ್ಟ್‌ಮೆಂಟ್ ನಿವಾಸಿಗಳು ಅಸೋಕ್ ಅಲಿಯಾಸ್ ಆಶ್ರಫ್ ತಮ್ಮ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಮಾಲೀಕರಿಗೆ ಅಲವತ್ತುಕೊಂಡಾಗಲೂ ಮಾಲೀಕ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ. ಮಾಲೀಕರ ಬೇಜವಾಬ್ದಾರಿ ದುಷ್ಕೃತ್ಯಕ್ಕೆ ಹೇತುವಾಗಿದೆ.
ಹಾಗೆಯೇ, ಘಟನೆ ನಡೆಯುತ್ತಿದ್ದಂತೆ ಅಪಾರ್ಟ್‌ಮೆಂಟ್ ನಿವಾಸಿಗಳೂ ಉದಾಸೀನ ಭಾವ ತಾಳಿದ್ದು ಆರೋಪಿ ಅಸೋಕ್ ಸಲೀಸಾಗಿ ನುಣುಚಿಕೊಳ್ಳಲು ಸಹಾಯಕವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿಷಾದ ವ್ಯಕ್ತಪಡಿಸಿದ್ದಾರೆ.
ಇನ್ನೂ ಬೇಸರದ ಸಂಗತಿಯೆಂದರೆ ಅಪಾರ್ಟ್‌ಮೆಂಟ್ ನಿವಾಸಿಗಳು ದಿನಬೆಳಗಾದರೆ ತಾವು ನೋಡುತ್ತಿದ್ದ ವ್ಯಕ್ತಿ ಕಣ್ಣೆದುರೇ ರಕ್ತದ ಮಡುವಿನಲ್ಲಿ ಬಿದ್ದಿರುವಾಗ ಕನಿಷ್ಠ ಅವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯುವ ದೊಡ್ಡ ಮನಸ್ಸೂ ಮಾಡಿಲ್ಲ. ಇಷ್ಟೊಂದು ನಿರ್ಲಕ್ಷ್ಯ ಮನೋಭಾವ ತಾಳಿದರೆ ಹೇಗೆ? ಈ ಹತ್ಯೆ ಇನ್ನಾದರೂ ಇಂತಹ ಬೇಜವಾಬ್ದಾರಿ ನಾಗರಿಕರ ಕಣ್ಣು ತೆರೆಸಲಿ ಎಂದು ಪೊಲೀಸರು ಆಶಿಸಿದ್ದಾರೆ.












Click it and Unblock the Notifications