ಅನುಸೂಯ ಹತ್ಯೆಗೆ ಕಾವಲುಗಾರನ ಅಸಭ್ಯ ವರ್ತನೆಯೇ ಕಾರಣ
ಬೆಂಗಳೂರು,
ಅ.9: ಎಸ್‌ಬಿಎಂ ಕ್ಯಾಶಿಯರ್ ಅನುಸೂಯ ಹತ್ಯೆ ಪ್ರಕರಣದ ಬೆನ್ನುಹತ್ತಿರುವ ಶೇಷಾದ್ರಿಪುರಂ ಪೊಲೀಸರು ಪ್ರಮುಖ ಆರೋಪಿ, ಪೋಲೋ ಗಾರ್ಡ್ ಅಪಾರ್ಟ್‌ಮೆಂಟ್ ಕಾವಲುಗಾರ ಆಶ್ರಫ್ ಖಾನ್‌ನ ಸೆರೆಗೆ ವ್ಯಾಪಕ ಬಲೆ ಬೀಸಿದ್ದಾರೆ. ಈ ಮಧ್ಯೆ, ಶನಿವಾರ ಸಂಜೆ ಅನುಸೂಯ ಅವರ ಅಂತ್ಯಕ್ರಿಯೆ ನಡೆಯಿತು. id="toptextpromo">ಈ
ಮಧ್ಯೆ, ಅಪಾರ್ಟ್‌ಮೆಂಟ್ ಕೆಲ ಮಹಿಳೆಯರ ಜತೆ ಸೆಕ್ಯುರಿಟಿಗಾರ್ಡ್ ಆಶ್ರಫ್ ಖಾನ್ ಅಸಭ್ಯವಾಗಿ ವರ್ತಿಸುತ್ತಿದ್ದ. ಅದೇ ರೀತಿ ಅನುಸೂಯ ಅವರೊಂದಿಗೂ ಅನುಚಿತವಾಗಿ ವರ್ತಿಸಿದ ಈತನ ವಿರುದ್ಧ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಕ್ಕೆ ದೂರು ನೀಡಲಾಗಿತ್ತು. ಹಾಗಾಗಿ ದ್ವೇಷ ಸಾಧಿಸಿದ ಕಾವಲುಗಾರ ಹತ್ಯೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಸಂಬಂಧ ಅಸ್ಸಾಂ ಮೂಲದ ಆಶ್ರಫ್ ನ ಇಬ್ಬರು ಸ್ನೇಹಿತರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಕೆಲ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಆರೋಪಿ ಹತ್ಯೆ ನಡೆದ ಶುಕ್ರವಾದಂದು ಅಸ್ಸಾಂನಲ್ಲಿ ತನ್ನ ಸಂಬಂಧಿಗಳ ಜತೆ ಮೊಬೈಲಿನಲ್ಲಿ ಮಾತನಾಡಿದ್ದಾನೆ. ಹೀಗಾಗಿ ಅವನು ನೇರವಾಗಿ ಅಸ್ಸಾಂಗೆ ಪರಾರಿಯಾಗಿರುವ ಸಾಧ್ಯತೆಯಿದ್ದು, ಹಂತಕನ ಬಂಧನಕ್ಕೆ ಪೊಲೀಸ್ ತಂಡವೊಂದು ಈಗಾಗಲೇ ಅಸ್ಸಾಂ ತಲುಪಿಕೊಂಡಿದೆ ಎಂದು ಶೇಷಾದ್ರಿಪುರಂ ಎಸಿಪಿ ಓಕಾಂರಯ್ಯ ತಿಳಿಸಿದ್ದಾರೆ.











Click it and Unblock the Notifications