173 ಸೈಟು ಗುಳಂ ಮಾಡಿದ ಬೆಂಗ್ಳೂರ್ ಶ್ರೀಮಂತ ರೆಡ್ಡಿ

Prasad Reddy
ಬೆಂಗಳೂರು, ಅ.7: 2008ರ ಅಸೆಂಬ್ಲಿ ಚುನಾವಣೆಯ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದ ಬಿಜೆಪಿಯ ಪ್ರಭಾವಿ ಜಿ ಪ್ರಸಾದ್ ರೆಡ್ಡಿ ಎಂಬಾತ ಹೌಸಿಂಗ್ ಸೊಸೈಟಿಗೆ ಸಬ್ಸಿಡಿ ದರದಲ್ಲಿ ಸರ್ಕಾರ ನೀಡಿದ ಜಾಗವನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಗಳಿಸಿದ ಪ್ರಕರಣವನ್ನು ದ ಹಿಂದೂ ಪತ್ರಿಕೆ ವರದಿ ಮಾಡಿದೆ.

2008ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ನ 331 ಕೋಟಿ ರು ಆಸ್ತಿ ಘೋಷಣೆ ಮಾಡಿದ್ದ ಪ್ರಸಾದ್ ರೆಡ್ಡಿ ಈಗ ವೈಯ್ಯಾಲಿಕಾವಲ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಹೊಂದಿದ್ದು, ಆ ಮೂಲಕ ಭಾರೀ ಅವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ.

ರೆಡ್ಡಿ ತನ್ನ ಸೊಸೈಟಿ ಮೂಲಕ 2004ರ ಎಪ್ರಿಲ್ 5, 7 ಮತ್ತು 17ರಂದು ನಾಗವಾರದಲ್ಲಿ ತಲಾ 2,400ಚದರ ಅಡಿ ಜಾಗದಂತೆ ಒಟ್ಟು 173 ನಿವೇಶನಗಳನ್ನು ಹಂಚಿದ. ರೆಡಿಗೆ ಈ ಜಾಗ ಸರ್ಕಾರದಿಂದ ಚದರ ಅಡಿಗೆ ಕೇವಲ 225 ರೂಪಾಯಿಗೆ ಲಭಿಸಿತ್ತು.

ಪ್ರಸಾದ್ ರೆಡ್ಡಿ ಸರ್ಕಾರವು 1986ರ ಫೆ. 2ರಂದು ಇದೇ ಸೊಸೈಟಿಗೆ ಸಬ್ಸಿಡಿ ದರದಲ್ಲಿ ಈ ಜಾಗ ನೀಡಿದ್ದು, ಇದನ್ನು ನಿಜವಾದ ಫಲಾನುಭವಿಗಳಿಗೆ ಹಂಚಲು ನಿರ್ದೇಶನ ನೀಡಲಾಗಿತ್ತು.

ಆದರೆ ಈ ರೆಡ್ಡಿ ಸೊಸೈಟಿ ನಿಯಮ/ಬೈಲಾಗಳನ್ನು ಉಲ್ಲಂಘಿಸಿ ಭಾರೀ ಹಣ ಪಡೆದು ಶ್ರೀಮಂತ ಡೆವಲಪರ್‍ಸ್‌ಗೆ ಮಾರಾಟ ಮಾಡಿದ್ದ ಎಂದು ಆರೋಪಿಸಲಾಗಿದೆ.

ಬ್ಯಾಂಕ್ ಹಣೆಗೂ ನಾಮ ಬಳಿದ ರೆಡ್ಡಿ?..ಓದಿ ಮುಂದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+