ಆಪಲ್ ಟೆಕ್ ತೋಟ ಅನಾಥ, ಸ್ಟೀವ್ ಜಾಬ್ಸ್ ನಿಧನ

"ಇಂದು ಸ್ಟೀವ್ ಜಾಬ್ಸ್ ನಿಧನರಾಗಿದ್ದಾರೆ ಅಂತ ಹೇಳಲು ವೇದನೆಯಾಗುತ್ತಿದೆ" ಎಂದು ಆಪಲ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊದಲ್ಲಿ ಸ್ಟೀವ್ ಜಾಬ್ಸ್ ನಿಧನರಾಗಿದ್ದಾರೆ. 2004ರಿಂದ ಸ್ಟೀವ್ ಜಾಬ್ಸ್ ಹಲವು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರು.
ಆಪಲ್ ತನ್ನ ಇತ್ತೀಚಿನ ಐಫೋನ್ ಹೊರತಂದ ಮರುದಿನವೇ ಸ್ಟೀವ್ ಜಾಬ್ಸ್ ಇನ್ನಿಲ್ಲವೆಂಬುದು ಆಪಲ್ ಉತ್ಪನ್ನಗಳ ಅಭಿಮಾನಿಗಳಿಗೆ ಷಾಕ್ ನೀಡಿದಂತಾಗಿದೆ.
ಜಗತ್ತಿಗೆ ಸುಂದರ ಐಪಾಡ್ ಮತ್ತು ಐಫೋನ್ ನೀಡಿದ ಸಿಲಿಕಾನ್ ವ್ಯಾಲಿ ಐಕಾನ್ ಸ್ಟೀವ್ ಬಾಬ್ಸ್ ಈ ವರ್ಷದ ಆಗಸ್ಟ್ ನಲ್ಲಿ ಆಪಲ್ ಸಿಇಒ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಟಿಮ್ ಕುಕ್ ಸಿಇಒ ಆಗಿ ನೇಮಕಗೊಂಡಿದ್ದರು.












Click it and Unblock the Notifications