ಐಐಟಿ ಹಳೆ ವಿದ್ಯಾರ್ಥಿ ಇನ್ಫಿ ಮೂರ್ತಿ ಕೊಂಕು ನುಡಿ

ಮನೇಲಿ ಮಾತ್ರ ಕನ್ನಡ ಮಾತಾಡುತ್ತೀನಿ ಎಂದು ಹೇಳಿ ಕನ್ನಡ ಕಾರ್ಯಕರ್ತರ ಕೋಪಕ್ಕೆ ಗುರಿಯಾಗಿದ್ದರು. ಇತ್ತೀಚೆಗೆ ಐಐಟಿ ವಿದ್ಯಾರ್ಥಿಗಳ ಗುಣಮಟ್ಟವನ್ನು ಪ್ರಶ್ನಿಸಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.
ಕುತೂಹಲದ ಸಂಗತಿ ಎಂದರೆ ಇನ್ಫೋಸಿಸ್ ನ ಸ್ಥಾಪಕರಲ್ಲಿ ನಾರಾಯಣ ಮೂರ್ತಿ ಹಾಗೂ ನಂದನ್ ನಿಲೇಕಣಿ ಇಬ್ಬರೂ ಐಐಟಿ ಹಳೆ ವಿದ್ಯಾರ್ಥಿಗಳಾಗಿದ್ದಾರೆ.
ಅ.3ರಂದು ನ್ಯೂಯಾರ್ಕ್ ನಲ್ಲಿ ನೂರಾರು ಜನ ಐಐಟಿ ವಿದ್ಯಾರ್ಥಿಗಳು ಸೇರಿದ್ದ ಸಮಾವೇಶದಲ್ಲಿ
"Thanks to the coaching classes today, the quality of students entering IITs has gone lower and lower."
ಎಂದು ಹೇಳಿದ್ದರು.
ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗುವ ಟಾಪ್ ವಿದ್ಯಾರ್ಥಿಗಳಲ್ಲಿ ಶೇ.20ರಷ್ಟು ವಿದ್ಯಾರ್ಥಿಗಳು ಮಾತ್ರ ವಿಶ್ವದ ಯಾವುದೇ ಸ್ಥಳದಲ್ಲಾದರೂ ಶ್ರೇಷ್ಠತೆ ಮೆರೆಯಬಲ್ಲರು. ಉಳಿದ ಶೇ.80 ರಷ್ಟು ವಿದ್ಯಾರ್ಥಿಗಳ ಗುಣಮಟ್ಟದ ಬಗ್ಗೆ ಹೇಳದಿರುವುದೇ ಒಳ್ಳೆಯದು ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದರು.












Click it and Unblock the Notifications