ಇನ್ಫೋಸಿಸ್ ಬಾಡಿ ಶಾಪಿಂಗ್ ಕಂಪನಿ : ಚೇತನ್
ನವದೆಹಲಿ,
ಅ.5: ಐಐಟಿ ವಿದ್ಯಾರ್ಥಿಗಳ ಗುಣಮಟ್ಟದ ಬಗ್ಗೆ ಇನ್ಫೋಸಿಸ್‌ನ ಮಾಜಿ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ನೀಡಿದ್ದ ಹೇಳಿಕೆಯನ್ನು ಐಐಟಿ ಹಳೆ ವಿದ್ಯಾರ್ಥಿ ಲೇಖಕ ಚೇತನ್ ಭಗತ್ ತೀಕ್ಷ್ಣವಾಗಿ ಖಂಡಿಸಿದ್ದಾರೆ. id="toptextpromo">ಹೊರಗುತ್ತಿಗೆಯನ್ನೇ
ನಂಬಿಕೊಂಡು ಬದುಕುತ್ತಿರುವ ಇನ್ಫೋಸಿಸ್ 'ಬಾಡಿ ಶಾಪಿಂಗ್' ಕಂಪನಿ ಎಂದು ಹೀಯಾಳಿಸಿದ್ದಾರೆ. ಬಾಡಿ ಶಾಂಪಿಂಗ್ ಕಂಪನಿ ನಡೆಸಿ, ಎಲ್ಲೆಡೆ ನಮ್ಮದು ಹೈಟೆಕ್ ಕಂಪನಿ ಎಂದು ಹೇಳಿಕೊಂಡು ತಿರುಗುವ ಮೂರ್ತಿ, ಐಐಟಿ ವಿದ್ಯಾರ್ಥಿಗಳ ಗುಣ ಮಟ್ಟದ ಬಗ್ಗೆ ಮಾತನಾಡುವುದು ವ್ಯಂಗ್ಯವಾಗಿದೆ ಎಂದು ಚೇತನ್ ಟ್ವೀಟ್ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇನ್ಫೋಸಿಸ್
ಇಂದಿನ ಸ್ಥಿತಿಗೆ ನೂರಾರು ಐಐಟಿ ಪದವೀಧದರ ಪರಿಶ್ರಮ ಕಾರಣ ಎಂಬುದನ್ನು ಮೂರ್ತಿ ಮರೆಯಬಾರದು. ಸಮಸ್ಯೆ ಬಗ್ಗೆ ಎತ್ತಿ ಆಡುವ ಬದಲು ಪರಿಹಾರ ಸೂಚಿಸುವುದು ಒಳ್ಳೆಯದು ಎಂದು ಚೇತನ್ ಟ್ವೀಟ್ ನಲ್ಲಿ ಹೇಳಿದ್ದಾರೆ.











Click it and Unblock the Notifications