ಶರಾಬು ಕುಡಿದು ರಸ್ತೇಲಿ ಹಾರಾಡಿದ ಗಗನಸಖಿ, ಪ್ರಿಯತಮನ ಬಂಧನ

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಲೀನಾ ಮೊದಲು ಆಟೊ ರಿಕ್ಷಾಗೆ ಗುದ್ದಿದ್ದಾಳೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರನ್ನು ಬಯ್ಯತೊಡಗಿದ್ದಾಳೆ. ಆಟೊ ಚಾಲಕನನ್ನು ಎಳೆದಾಡಿದ್ದಾಳೆ. ಇವಳ ಅವತಾರ ಕಂಡು ಬೆಚ್ಚಿಬಿದ್ದ ಪೊಲೀಸರು ತಕ್ಷಣ ಮಹಿಳಾ ಪೊಲೀಸರನ್ನು ಕರೆಸಿದ್ದಾರೆ.
ಸ್ಥಳಕ್ಕೆ ಬಂದ ಮಹಿಳಾ ಪೇದೆಯನ್ನು ಮನಸಾರೆ ಬೈದ ಲೀನಾ, ಅದು ಸಾಲದು ಎಂಬಂತೆ ಆಕೆಗೆ ಬಾರಿಸಿದ್ದಾಳೆ ಎಂದು ಬಂಗೂರ್ ನಗರ ಪೊಲೀಸರು ಹೇಳಿದ್ದಾರೆ.
ಲೀನಾ, ಇಬ್ಬರು ಪುರುಷರೊಂದಿಗೆ ಕಾರಿನಲ್ಲಿದ್ದಳು. ಅದರಲ್ಲೊಬ್ಬ ರಾಖಿಲ್ ಸಾವಂತ್ ಎಂಬಾತ ಲೀನಾಳ ಬಾಯ್ ಫ್ರೆಂಡ್ ಎಂದು ತಿಳಿದುಬಂದಿದೆ. ಇಬ್ಬರನ್ನೂ ಬಂಧಿಸಿ, ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಮತ್ತೊಬ್ಬಾತ ಗದ್ದಲದ ವೇಳೆ ಪರಾರಿಯಾಗಿದ್ದಾನೆ ಎಂದು ಆರ್ ಟಿಒ ಇನ್ಸ್‌ಪೆಕ್ಟರ್ ಮುಳೆ ತಿಳಿಸಿದ್ದಾರೆ.












Click it and Unblock the Notifications