ಯುವತಿಯ ಮೇಲೆ ಆಸಿಡ್ ದಾಳಿ: ಭಗ್ನ ಪ್ರೇಮ ಕಾರಣ?
ಜೈಪುರ,
ಅ.5: ರಾಜಸ್ಥಾನದ ಬಿಲ್ವಾರಾ ಜಿಲ್ಲೆಯಲ್ಲಿ ಸೋಮವಾರ ರಾತ್ರಿ 19 ವರ್ಷದ ಯುವತಿಯ ಮೇಲೆ ಅಪರಿಚಿತ ಯುವಕನೊಬ್ಬ ಆಸಿಡ್ ಸುರಿದಿದ್ದು, ಆಕೆಗೆ ತೀವ್ರ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಭಗ್ನ ಪ್ರೇಮಿಯ ಕುಕೃತ್ಯವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. id="toptextpromo">ಇಲ್ಲಿನ
ಪ್ರತಾಪ್ ನಗರದಲ್ಲಿ 'ಗಾರ್ಬಾ' ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಾಪಸಾಗುತ್ತಿದ್ದ ವೇಳೆ ಸಂಗೀತಾ ಮೀನಾ ಎಂಬ ಯುವತಿಯ ಮೇಲೆ ಈ ದಾಳಿ ನಡೆದಿದೆ. 'ಕತ್ತಲಲ್ಲಿ ಯಾರೋ ಬಂದು ನನ್ನ ಮೇಲೆ ಆಸಿಡ್ ಸುರಿದಂತಾಯಿತು. ಆ ವ್ಯಕ್ತಿ ಮುಖವಾಡ ಧರಿಸಿದ್ದ' ಎಂದು ಬಾಧಿತ ಮೀನಾ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಎಂಎ
ವ್ಯಾಸಂಗ ಮಾಡುತ್ತಿರುವ ಮೀನಾಗೆ ಮುಖ, ಕತ್ತು, ಎದೆ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಆಕೆಯನ್ನು ತಕ್ಷಣ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ದಾಳಿಕೋರನ ಬೆನ್ನುಹತ್ತಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸುವ ಸಾಧ್ಯತೆ ಇದೆ.











Click it and Unblock the Notifications