ಮಹಿಳೆಯರ ರೂಮಿನಲ್ಲಿ ಸೇಲ್ಸ್ ಮನ್ ಏನು ಮಾಡಿದಾ ಗೊತ್ತಾ?

ಇಲ್ಲಿನ ಪಯ್ಯನೂರು ಬಟ್ಟೆ ಅಂಗಡಿಯಲ್ಲಿ ಇಂತಹ ರಹಸ್ಯ 'ಕಾರ್ಯಾಚರಣೆ' ನಡೆದಿದ್ದು, ಅಂಗಡಿಯ ಕೆಲಸಗಾರನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪಿ ಸಿ ಜುಬೇರ್ (40) ಬಂಧಿತ ವ್ಯಕ್ತಿ. ಇಲ್ಲಿನ ಹಳೆಯ ಬಸ್ ಸ್ಟಾಂಡ್ ಸಮೀಪ ಮುಖ್ಯ ರಸ್ತೆಯಲ್ಲಿರುವ ಗಾರ್ಮೆಂಟ್ಸ್ ಸ್ಟೋರಿನಲ್ಲಿ ಸೇಲ್ಸ್ ಮನ್ ಕಮ್ ಸೂಪರ್ ವೈಸರ್ ಆಗಿ ಕೆಲಸದಲ್ಲಿದ್ದಾನೆ. ಆರೋಪಿಯು ತಲಿಪರಂಬ ನಿಟ್ಟುವಯಾಲ್ ನಿವಾಸಿ.
ಅಕ್ಟೋಬರ್ 1ರಂದು ಸಂಜೆ ಪಯ್ಯನೂರು ನಿವಾಸಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಬಟ್ಟೆ ಖರೀದಿಗೆಂದು ಈ ಅಂಗಡಿಗೆ ಬಂದಿದ್ದರು. ಆಕೆ ಹೊಸ ಬಟ್ಟೆ ಧರಿಸಿ, ಟ್ರಯಲ್ ನೋಡುವಾಗ trial room ನ ಮೂಲೆಯೊಂದರಲ್ಲಿ ರಹಸ್ಯವಾಗಿ ಮೊಬೈಲ್ ಕ್ಯಾಮರಾ ಆನ್ ಆಗಿರುವುದು ಆಕೆಯ ಗಮನಕ್ಕೆ ಬಂದಿದೆ.
ತಕ್ಷಣ ಆ ಮೊಬೈಲ್ ಅನ್ನು ಅಲ್ಲಿಂದ ತೆಗೆದುಕೊಂಡ ಡೆಂಟಲ್ ವಿದ್ಯಾರ್ಥಿನಿ ಅದನ್ನು ಬಸ್ ಸ್ಟಾಂಡ್ ಸಮೀಪವಿದ್ದ ಪೊಲೀಸ್ ಚೌಕಿಗೆ ತಲುಪಿಸಿದ್ದಾಳೆ. ಪೊಲೀಸರು ಮೊಬೈಲ್ ಕ್ಯಾಮರಾವನ್ನು ಪರಿಶೀಲಿಸಿದಾಗ ಮಹಿಳೆಯರು ಬಟ್ಟೆ ಬದಲಿಸುತ್ತಿರುವ ದೃಶ್ಯಗಳು ಅದರಲ್ಲಿ ದಾಖಲಾಗಿದ್ದು ಪತ್ತೆಯಾಗಿದೆ. ತಕ್ಷಣ, ಮೊಬೈಲ್ ವಾರಸುದಾರರನ್ನು ಪತ್ತೆಹಚ್ಚಿದ ಪೊಲೀಸರು ಅದು ಜುಬೇರನದು ಎಂದು ತಿಳಿಯುತ್ತಿದ್ದಂತೆ ಅವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದರಿಂದ ಘಾಸಿಗೊಂಡ ಮಹಿಳಾ ಗ್ರಾಹಕರು ಮತ್ತು ಸ್ಥಳೀಯರು ಗಾರ್ಮೆಂಟ್ಸ್ ಸ್ಟೋರಿಗೆ ಮುತ್ತಿಗೆ ಹಾಕಿ ದಾಂಧಲೆಯೆಬ್ಬಿಸಿದರು. ಬಟ್ಟೆ, ಪೀಠೋಪಕರಣ, ಗ್ಲಾಸುಗಳನ್ನು ಚಿಂದಿಚಿಂದಿ ಮಾಡಿದರು.












Click it and Unblock the Notifications