ಈ ಬಾರಿ ಜರ್ಮನಿಯ 'ರೊಸ್ಯಾಟ್' ಉಪಗ್ರಹ ಬೀಳುವ ಅಪಾಯ
ಲಂಡನ್,
ಅ.4: ನಾಸಾದ ಯುಎಆರ್ಎಸ್ ಉಪಗ್ರಹದ ಅವಶೇಷಗಳು ಪೆಸಿಫಿಕ್ ಮಹಾಸಾಗರದಲ್ಲಿ ಬಿದ್ದ ಬೆನ್ನಲ್ಲಿಯೇ ಇಂಥದ್ದೇ ಮತ್ತೊಂದು ಉಪಗ್ರಹವು ಭೂಮಿಗೆ ಅಪ್ಪಳಿಸುವ ಹಂತದಲ್ಲಿದೆ. ಜರ್ಮನಿಯ 'ರೊಸ್ಯಾಟ್' ಉಪಗ್ರಹವು ಈ ತಿಂಗಳ ಅಂತ್ಯದಲ್ಲಿ ಅಥವಾ ನವೆಂಬರಿನಲ್ಲಿ ಬಾಹ್ಯಾಕಾಶ ಕಕ್ಷೆಯಿಂದ ಭೂಮಿಗೆ ಬೀಳಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. id="toptextpromo">1990ರಲ್ಲಿ
ಈ ರೋಯಿಂಗ್ಟನ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಲಾಗಿತ್ತು. 1998ರಲ್ಲಿ ಇದರ ಆಯುಷ್ಯ ಮುಗಿದಿತ್ತು. ಅಲ್ಲಿಂದ ಈ ಉಪಗ್ರಹವು ಭೂಮಿಯ ಸುತ್ತ ಪರಿಭ್ರಮಣ ನಡೆಸುತ್ತಿತ್ತು. ಎರಡೂವರೆ ಟನ್ ಭಾರದ ಈ ಉಪಗ್ರಹವು ಬೇರಾವುದೆ ಆಕಾಶಕಾಯಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಬಹಳ ಕಡಿಮೆ ಇದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ. id='are-slot-1' class='oiad oi-axt oiadv'> id='top-searched-articles'>ಉಪಗ್ರಹವು
ನಿರ್ದಿಷ್ಟವಾಗಿ ಎಲ್ಲಿ ಬೀಳುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಎಲ್ಲೇ ಬಿದ್ದರೂ ಹೆಚ್ಚಿನ ಹಾನಿಯಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸೋ ಅಷ್ಟರಮಟ್ಟಿಗೆ ನಾವು ನಿರಾತಂಕವಾಗಿರಬಹುದು.











Click it and Unblock the Notifications