ವಂಚಕನ ಧರ್ಮಪತ್ನಿ, ಪ್ರೇಯಸಿಯ ಕರೆ ಮಾಲೀಕನನ್ನು ಬಚಾವು ಮಾಡಿತು

ಆದರೆ ಎರಡು ದಿನಗಳ ಬಳಿಕ ಕೇತನ್ ನ ಧರ್ಮ ಪತ್ನಿಯು 'ಎಲ್ಲಿ ನಮ್ಮೆಜಮಾನ್ರು. ಎರಡು ದಿನದಿಂದ ಮನೆಗೇ ಬಂದಿಲ್ಲ. ಎಲ್ಲಾದರೂ ಕಳಿಸಿದ್ದೀರಾ' ಎಂದು ಮಾಲೀಕರಿಗೆ ಫೋನ್ ಮಾಡಿ ವಿಚಾರಿಸಿದರು.
ಆಗ ಧಸಕ್ಕೆಂದಿದೆ ಮಾಲೀಕನ ಹೃದಯ. ಬ್ಯಾಂಕಿಗೆ ಹಣ ತುಂಬದೆ ಇವಯ್ಯ ಗೆಳತಿಯೊಂದಿಗೆ ಪರಾರಿಯಾಗಿರುವುದು ತಡವಾಗಿ ಅರಿವಿಗೆ ಬಂದಿದೆ. ಸರಿ ಇಬ್ರೂ ಎದ್ನೋ, ಬಿದ್ನೋ ಎಂದು ಪೊಲೀಸ್ ಠಾಣೆಯತ್ತ ದೌಡಾಯಿಸಿ, ದೂರು ದಾಖಲಿಸಿದ್ದಾರೆ.
ರಂಗಕ್ಕಿಳಿದ ಪೊಲೀಸರು ಆರೋಪಿ ಕೇತನನನ್ನು ಬಂಧಿಸಿ, ಹಣ ವಾಪಸು ಪಡೆದಿದ್ದಾರೆ. ಆದರೆ ಆ ವೇಳೆಗೆ ಅವಯ್ಯ ಅವಳಿಗಾಗಿ ಒಂದೂವರೆ ಲಕ್ಷ ರು. ಖರ್ಚು ಮಾಡಿದ್ದ. ಅಂತಿಮವಾಗಿ, ಸದ್ಯ ಅಷ್ಟಾದರೂ ವಾಪಸ್ ಸಿಕ್ಕಿತಲ್ಲ ಎಂದು ಮಾಲೀಕರು ಸಮಾಧಾನಪಟ್ಟುಕೊಂಡರೆ, ಅವನ ಧರ್ಮಪತ್ನಿ ನನ್ನ ಗಂಡ ವಾಪಸ್ ಬಂದನಲ್ಲ ಎಂದು ಖುಷಿಯಾಗಿದ್ದಾರೆ.
ಮಿಕ ಬಲೆಗೆ ಬಿದ್ದಿದ್ದಾದರೂ ಹೇಗೆ ಎಂದರೆ ಹಣ ಲಪಟಾಯಿಸಿದ ಬಳಿಕ ಗೆಳತಿಗೆ ಫೋನ್ ಮಾಡಿದ್ದಾನೆ. ನನ್ನ ಬಳಿ ಈಗ ಸಖತ್ ದುಡ್ಡಿದೆ. ಇನ್ನು, ನಾನೂ-ನೀನು ಮದ್ವೆ ಆಗಬಹುದು ಎಂದಿದ್ದಾನೆ. ಅದು ಹೇಗೋ ವಿಷಯ ಪೊಲೀಸರಿಗೆ ಸಿಕ್ಕಿದೆ. ಸರಿ, ಗೆಳತಿಯ ಸಹಾಯ ಪಡೆದು ಮಿಕವನ್ನು ಬಲೆಗೆ ಕೆಡವಿದ್ದಾರೆ. ಅವಳೋ ಮೊದಲ ಗಂಡನಿಂದ ವಿಚ್ಛೇಧನ ಪಡೆದು, ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ಜೀವಿಸುತ್ತಿದ್ದಳು.












Click it and Unblock the Notifications