ಪರಸ್ತ್ರೀ ಸಂಗ: 30 ಲಕ್ಷ ಪಂಗನಾಮ ಹಾಕಿದ ಅಕೌಂಟೆಂಟ್

ಆದರೆ ಅವನಿಗೆ ಹೆಚ್ಚು ಕಾಲ ತಡೆಯಲಾಗಲಿಲ್ಲ. ಅದೊಂದು ದಿನ ಇಲ್ಲಿನ ವಿಲೆ ಪಾರ್ಲೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಹೋಗಿ 30 ಲಕ್ಷ ರುಪಾಯಿ ಜಮಾ ಮಾಡಿ ಬಾ ಎಂದು ತಾನು ಕೆಲಸದಲ್ಲಿದ್ದ ಸಂಸ್ಥಯವರು ದುಡ್ಡು ಕೊಟ್ಟರೆ, ಅದನ್ನು ಬ್ಯಾಂಕಿಗೆ ಜಮಾ ಮಾಡದೆ ಪ್ರಿಯತಮೆಯೊಂದಿಗೆ ಮಜಾ ಮಾಡಲು ಬಳಸತೊಡಗಿದ.
ಆರೋಪಿ ಕೇತನ್ ಷಾ (36) ಇಲ್ಲಿನ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಅನೇಕ ವರ್ಷಗಳಿಂದ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಮಾಲೀಕರೂ ಇವನನ್ನು ನಂಬಿದ್ದರು. ಹಾಗೆಂದೇ ಕಳೆದ ವಾರದಲ್ಲಿ ಎಸ್ ಬಿಐ ಶಾಖೆಯಲ್ಲಿ ಜಮಾ ಮಾಡು ಎಂದು 30 ಲಕ್ಷ ರುಪಾಯಿ ನೀಡಿದರು. ಇವನೋ... ಆಯ್ತು ಬ್ಯಾಂಕಿಗೆ ಹಣ ಕಟ್ತೀನಿ. ಆದರೆ ವಾಪಸು ಬರೋಲ್ಲ; ಹಾಗೇ ಮನೆಗೆ ಹೋಗುತ್ತೇನೆ ಎಂದು ಮಾಲೀಕರಿಗೆ ತಿಳಿಸಿದ.
ಆಯ್ತು ಬಿಡು. ಮನೆಗೆ ಹೋಗ್ತಾ ಬ್ಯಾಂಕಿಗೆ ಕಟ್ಟಿ ಹೋಗು. ಹ್ಯಾಗೂ ಆವತ್ತಿಂದ ಕೆಲಸ ಮಾಡ್ತಿದ್ದಾನೆ. ನಂಬಿಗಸ್ಥನೇ ಎಂದು ಮಾಲೀಕರು ಹೆಚ್ಚು ಯೋಚಿಸದೆ ಸುಮ್ಮನೆ ತಲೆಯಾಡಿಸಿದರು. ಧರ್ಮಪತ್ನಿ, ಪ್ರೇಯಸಿಯ ಕರೆ ಮಾಲೀಕನನ್ನು ಬಚಾವು ಮಾಡಿದ್ದು ಹೇಗೆ? ಮುಂದೆ ಓದಿ...












Click it and Unblock the Notifications