ಬಿಲ್ಡರ್ ಮನೆಯಲ್ಲಿ ಪೋಲಿ ಪಾರ್ಟಿ, 34 ಜನ ಸೆರೆ

ಬಂಧಿತರಲ್ಲಿ 14 ಮಂದಿ ಉತ್ತರ ಭಾರತೀಯ ಯುವತಿಯರು, 20 ಮಂದಿ ಪುರುಷರು ಇದ್ದಾರೆ.
ನೆಲಮಂಗಲ, ದೊಡ್ಡಬಳ್ಳಾಪುರ ರಸ್ತೆಯ ಗುಟ್ಟೆಪಾಳ್ಯದ ಐಶ್ವರ್ಯಾ ಕೌಂಟಿ ಬಡಾವಣೆಯ ಗೌಸ್ಟ್ ಹೌಸ್ ನಲ್ಲಿ ಅಶ್ಲೀಲ ಪಾರ್ಟಿ ನಡೆದಿರುವ ಬಗ್ಗೆ ಖಚಿತ ಮಾಹಿತಿ ಮೇಲೆ ಶುಕ್ರವಾರ ಮುಂಜಾನೆ ದಾಳಿ ನಡೆಸಲಾಯಿತು.
ಬಂಧನದ ವೇಳೆ ಪುರುಷರು ಪಾನಮತ್ತರಾಗಿದ್ದರು, ಮಹಿಳೆಯರು ಅರೆಬೆತ್ತಲೆ ನೃತ್ಯದಲ್ಲಿ ನಿರತರಾಗಿದ್ದರು. ಮಾದಕ ದ್ರವ್ಯ ಸೇವನೆ ಬಗ್ಗೆ ಖಚಿತವಾಗಿ ಈಗಲೇ ಹೇಳಲಾಗದು. ಬಂಧಿತ ಪುರುಷರು ಮಂಗಳೂರು ಹಾಗೂ ಬೆಂಗಳೂರು ಮೂಲದವರಾಗಿದ್ದಾರೆ.
ಮಹಿಳೆಯರು ಕೋಲ್ಕತ್ತಾ, ದೆಹಲಿ, ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿದೆ. ಗೆಸ್ಟ್ ಹೌಸ್ ಆಂಧ್ರ ಪ್ರದೇಶದ ಭಾಸ್ಕರ್ ರೆಡ್ಡಿ ಎಂಬುವರಿಗೆ ಸೇರಿದೆ. ಇನ್ನೂ 15 ಜನ ತಪ್ಪಿಸಿಕೊಂಡಿದ್ದಾರೆ. ಇವರೆಲ್ಲರೂ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳಾಗಿದ್ದಾರೆ ಎಂದು ವೃತ್ತ ನಿರೀಕ್ಷಕ ಡಾ. ಪ್ರಕಾಶ್ ಹೇಳಿದರು.












Click it and Unblock the Notifications