ಯಡ್ಡಿ ದುಡ್ಡಿನ ಚೆಲ್ಲಾಟ: ಜೆಡಿಎಸ್ ಶಸ್ತ್ರತ್ಯಾಗ

ಆಗಲೇ ಅವರು ಶಸ್ತ್ರತ್ಯಾಗ ನಿರ್ಧಾರಕ್ಕೆ ಬಂದಿದ್ದು. ಆರು ತಿಂಗಳು ಅಥವಾ ಅಬ್ಬಬ್ಬಾ ಅಂದ್ರೆ 1 ವರ್ಷ ಬಾಳುವ ಫಲಿತಾಂಶಕ್ಕೆ ನಾನ್ಯಾಕೆ ಆ ಪಾಟಿ ದುಡ್ಡು ಸುರಿಯಲಿ ಎಂದವರೆ ನನಗೆ ಮೈ ಹುಷಾರಿಲ್ಲ. ನಾನು ಬರಾಕಿಲ್ಲ ಎಂದು ರಗ್ಗು ಎಳೆದುಕೊಂಡು ಮಲಗಿಬಿಟ್ಟರು.
ಇದರ ಸುಳಿವರಿತ ಯಡಿಯೂರಪ್ಪ ತಮ್ಮ ಪಟ್ಟು ಸಡಿಲಿಸಲಿಲ್ಲ. ಸ್ಥಳೀಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಅದಕ್ಕಿಂತ ಹೆಚ್ಚಾಗಿ ರೆಡ್ಡಿ ಸೋದರರಿಗೆ ಅವರ ಭದ್ರ ಕೋಟೆಯಂತಿದ್ದ ಕೊಪ್ಪಳದ ಕಡೆ ತಲೆಹಾಕದಂತೆ ತಾಕೀತು ಮಾಡಿದರು.
ಇನ್ನು, ಕಾಂಗ್ರೆಸ್ ಇಂದು ಎರಡನೇ ಸ್ಥಾನಕ್ಕೆ ಬಂದಿದೆ ಎಂದರೆ ಅದಕ್ಕೆ ಖಂಡಿತ ಆ ಪಕ್ಷದ ನಾಯಕರು ಕೊಚ್ಚಿಕೊಳ್ಳುವ ಹಾಗಿಲ್ಲ. ಏಕೆಂದರೆ ಜಡಿಎಸ್ ಗೆ ಟಾಂಗ್ ಕೊಡುವ ಭರದಲ್ಲಿ ಅದರ ವೋಟ್ ಬ್ಯಾಂಕನ್ನು ಯಡಿಯೂರಪ್ಪ ಛಿದ್ರಗೊಳಿಸಿದ್ದರು. ಅದರ ಶ್ರೇಯಸ್ಸಿನಲ್ಲೇ ಕಾಂಗ್ರೆಸ್ ಎರಡನೆಯ ಸ್ಥಾನಕ್ಕೆ ಎತ್ತಲ್ಪಟ್ಟಿತು. ಅಷ್ಟೊತ್ತಿಗೆ ಕುಮಾರಸ್ವಾಮಿಗೂ ಅಪ್ಪನ ರಾಜಕೀಯ ಚದುರಂಗ ಏನು ಎಂಬುದು ಅರಿವಿಗೆ ಬಂದಿತ್ತು. ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.












Click it and Unblock the Notifications