ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಡಿಯಾಟ: ಯಡಿಯೂರಪ್ಪ ತಾಕತ್ತಿನ ಅನಾವರಣ

By Srinath
|
Google Oneindia Kannada News

koppal-result-bs-yeddyurappa-strength-unfolds
ಬೆಂಗಳೂರು, ಸೆ.29: ಯಡಿಯೂರಪ್ಪ ಎಂಬ ಚಾಣಾಕ್ಷನ ಮುಂದೆ ದೊಡ್ಡಗೌಡರ ಆಟ ಏನೇನೂ ನಡೆಯಲಿಲ್ಲ. ಸಿಬಿಐ ಎಂಬ ಭೂತವನ್ನು ತುಸು ಜೋರಾಗಿಯೇ ಕುಣಿಸಿದ ಯಡಿಯೂರಪ್ಪ, ರೆಡ್ಡಿ ಬ್ರದರ್ಸ್ ಗೆ 'ಚುಪ್ ಹೋ' ಎಂದರು. ಅಷ್ಟೇ ಅಲ್ಲ. ಅವರ ಕಡೆಯವರಿಂದ ಮತ್ತಷ್ಟು ದುಡ್ಡು ಗೆಬರಿ, ಕೊಪ್ಪಳ ಎಂಬ ಬರಡು ಭೂಮಿಯಲ್ಲಿ ಮನಬಂದಂತೆ ಚೆಲ್ಲಿದರು.

ಇದೇ ವೇಳೆ, ಬೆಂಗಳೂರಿನಲ್ಲಿ ದೊಡ್ಡ ಗೌಡರ ದೊಡ್ಡ ಮಗನಿಗೆ ಲೋಕಾಯುಕ್ತ ಅಟಕಾಯಿಸಿಕೊಳ್ಳುವಂತೆ ನೋಡಿಕೊಂಡರು. ಜಿದ್ದಿಗೆ ಬಿದ್ದ ಯಡ್ಡಿ ಶತಾಯಗತಾಯ ಗೆಲ್ಲಲೇ ಬೇಕು ಎಂದು ಕರಡಿಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸತೊಡಗಿದರು.

ಹಾಗೆ ನೋಡಿದರೆ ಯಡಿಯೂರಪ್ಪ ಅವರಿಗೆ ಈ ಚುನಾವಣೆ ಮೂಲಕ ಸಾಧಿಸಿ, ತೋರಿಸುವುದು ಬಹಳಷ್ಟಿತ್ತು. ಅನೇಕರ ಬಾಯಿ ಮುಚ್ಚಿಸುವ ಅನಿವಾರ್ಯತೆ ಅವರಿಗಿತ್ತು. ಪಕ್ಷದಲ್ಲೇ ಮಗ್ಗಲಮುಳ್ಳುಗಳು ಚೂಪಾಗಿ ಚುಚ್ಚತೊಡಗಿದ್ದವು. ತಮ್ಮ ಸಾರಥ್ಯದಲ್ಲೇ ಈ ಉಪಚುನಾವಣೆಯನ್ನೂ ಎದುರಿಸಬೇಕು ಎಂದು ಪರಮಾಪ್ತ ಶೋಭಾ ಮೇಡಂ ಮೂಲಕ ಹೈಕಮಾಂಡಿಗೆ ಹೇಳಿಸಿ ನೋಡಿದರು. ಯಡ್ಡಿ ಕತೆ ಮುಗಿಯಿತು ಎಂದೇ ಎಣಿಸಿದ ಹೈಕಮಾಂಡ್ ಶೋಭಾರನ್ನು ಬರಿಗೈಲಿ ಕಳಿಸಿದರು.

English summary
JDS supremo HD Deve Gowda felt the pulse of Koppal By-election and the Money power of BSY. As such he stayed away from the election. Paving the wat for BJP's easy win. And Former chief minister B.S. Yeddyurappa's strength unfolded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X