ಚುನಾವಣೆಗೂ ಮೊದ್ಲೇ ದೊಡ್ಡಗೌಡರಿಗೆ ಪಕ್ಷದ ಹಣೆಬರಹ ಗೊತ್ತಿತ್ತು
ಬೆಂಗಳೂರು,
ಸೆ.29: ದೊಡ್ಡ ಗೌಡರಿಗೆ ಯಾನಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಿಗೆ ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಹಣೆಬರಹ ಏನು ಎಂಬುದು ಗೊತ್ತಾಗಿ ಹೋಗಿತ್ತು. ಇನ್ನೂ ಹತ್ತು ದಿನಗಳಿರುವಂತೆ ಯುದ್ಧಕ್ಕೆ ಮುನ್ನವೇ ಶಸ್ತ್ರ ತ್ಯಾಗ ಮಾಡಿ, ಭೀಷ್ಮ ಪಿತಾಮಹನಂತೆ ಮಲಗಿಯೇ ಬಿಟ್ಟರು. id="toptextpromo">ಅಭ್ಯರ್ಥಿಯ
ಪರ ಪ್ರಚಾರ ಮಾಡೊಕ್ಕೆ ಬರೋಲ್ಲ. ಶ್ವಾಸಕೋಶದಲ್ಲಿ ಕಫ ತುಂಬಿಕೊಂಡಿದೆ. ಕೆಮ್ಮು ಜಾಸ್ತಿಯಾಗ್ತಿದೆ. ಅಂಥಾದ್ದರಲ್ಲಿ ಕೊಪ್ಪಳದ ಧೂಳು ಇನ್ನೂ ಅಪಾಯಕಾರಿ ಎಂದು ಪಿಳ್ಳೆನೆವ ಹೇಳಿದವರೆ ಕೊಪ್ಪಳದ ಕಡೆ ತಲೆಯಿಡದೆ ಮಲಗಿ ಬಿಟ್ಟರು. ಹಾಗೆ ನೋಡಿದರೆ ಯಾವುದೇ ಚುನಾವಣೆ ಎಂದರೂ ಅತ್ಯುತ್ಸಾಹದಿಂದ ಸಿದ್ಧರಾಗುತ್ತಿದ್ದ ದೇವೇಗೌಡರು ಇದೇ ಮೊದಲ ಬಾರಿಗೆ ಪ್ರಚಾರ ಕಣದಿಂದ ದೂರವಾಗಿದ್ದರು. id='are-slot-1' class='oiad oi-axt oiadv'> id='top-searched-articles'>ಅದಕ್ಕೂ
ಮುನ್ನ ಸ್ವಲ್ಪ ಮಟ್ಟಿಗೆ ಚುನಾವಣೆ ಸಮ್ಮುಖದಲ್ಲಿ ಸ್ವಲ್ಪಮಟ್ಟಿಗೆ ರಾಜಕೀಯ ಮಾಡಲು ಮುಂದಾದರು. ಇದಕ್ಕೆ ನೀರೆರೆದವರು ಬಳ್ಳಾರಿಯ ರೆಡ್ಡಿ ಸೋದರರು. ಅದರಲ್ಲೂ ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಒಗಾಯಿಸಿ, ಜೆಡಿಎಸ್ಸಿನತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಗೌಡರು ಕಚ್ಚೆ ಎತ್ತಿಕಟ್ಟಿ ಕೊಪ್ಪಳಕ್ಕೆ ಹೊರಡಲು ಅನುವಾದರು. ಆದರೆ ಕರಡಿಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸತೊಡಗಿದ ಯಡಿಯೂರಪ್ಪನವರ ತಾಕತ್ತಿನ ಮುಂದೆ ದೊಡ್ಡಗೌಡರು ಮೂಕಪ್ರೇಕ್ಷಕರಾಗಿ ಉಳಿಯಬೇಕಾಯಿತು.











Click it and Unblock the Notifications