ಕಾರು ಚಲಾಯಿಸಿದ ತಪ್ಪಿಗೆ ಸೌದಿ ಮಹಿಳೆಗೆ 10 ಛಡಿಯೇಟು

Saudi woman to lashed 10 times
ರಿಯಾದ್, ಸೆ. 28 : ವಾಹನ ಚಾಲನಾ ನಿಷೇಧವನ್ನು ಉಲ್ಲಂಘಿಸಿ ಕಾರು ಚಲಾಯಿಸಿದ ತಪ್ಪಿಗೆ ಸೌದಿ ಅರೇಬಿಯಾದ ಮುಸ್ಲಿಂ ಮಹಿಳೆಗೆ ಪ್ರಾದೇಶಿಕ ನ್ಯಾಯಾಲಯವೊಂದು 10 ಛಡಿ ಏಟು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಶೈಮಾ ಘಸ್ಸಾನಿಯಾ ಶಿಕ್ಷೆಗೆ ಒಳಗಾದ ಮಹಿಳೆ. ಆಕೆ ಸರಕಾರದ ಅನುಮತಿಯಿಲ್ಲದೆ ಕಾರು ಚಲಾಯಿಸಿದ ಅಪರಾಧ ಎಸಗಿದ್ದಾಳೆ ಎಂದು ಕೋರ್ಟ್ ಫರ್ಮಾನು ಹೊರಡಿಸಿದೆ. ಕಾರು ಚಲಾಯಿಸುವ ಹಕ್ಕು ಕಸಿದುಕೊಳ್ಳುವಲ್ಲಿ ಮೌಲ್ವಿಗಳ ಕುಮ್ಮಕ್ಕು ಇದೆ ಎನ್ನಲಾಗಿದೆ.

ಆಶ್ಚರ್ಯಕರ ಸಂಗತಿಯೆಂದರೆ, 2015ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ನೀಡಿದ ಎರಡು ದಿನಗಳಲ್ಲಿಯೇ ಈ ಶಿಕ್ಷೆ ಹೊರಬಿದ್ದಿದೆ. ಅನುಮತಿಯಿಲ್ಲದೆ ಕಾರು ಚಲಾಯಿಸಿದ ಆರೋಪವನ್ನು ಅನೇಕ ಮಹಿಳೆಯರ ಮೇಲೆ ಹೊರಿಸಲಾಗಿದೆ.

ಕಳೆದ ಜೂನ್ ತಿಂಗಳಲ್ಲಿ, ತಮಗೆ ಸ್ವತಂತ್ರವಾಗಿ ಕಾರು ಚಲಾಯಿಸುವ ಹಕ್ಕು ಮತ್ತು ಮತ ಚಲಾವಣೆಯ ಹಕ್ಕು ನೀಡಬೇಕು ಎಂದು ಸೌದಿ ಮಹಿಳೆಯರು 'women2drive' ಎಂಬ ಅಭಿಯಾನದ ಮುಖಾಂತರ ಬೀದಿಗೆ ಇಳಿದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+