ಅಟಲ್, ಆಡ್ವಾಣಿ ಆಪ್ತ ಅಥಣಿಯ ಸುಧೀಂದ್ರ ತಿಹಾರ್ ಜೈಲಿಗೆ

cash-for-votes-atal-advani-aide-kulkarni-arrested
ಹೊಸದಿಲ್ಲಿ, ಸೆ. 28: ಅತ್ತ ಗುರುಗಳಾದ ಎಲ್ ಕೆ ಆಡ್ವಾಣಿ ಅವರು ಮತ್ತೊಂದು ರಥಯಾತ್ರೆಗೆ ಸಿದ್ಧತೆ ನಡೆಸಿರುವಾಗಲೇ ಅವರ ಆಪ್ತ ಶಿಷ್ಯ ಸುಧೀಂದ್ರ ಜೈಲುಪಾಲಾಗಿದ್ದಾರೆ. ಆದರೆ ಅವರನ್ನು ಜೈಲಿಗಟ್ಟಿದ ಸಿಬಿಐ ಗೂ ಸುಧೀಂದ್ರ ಅವರನ್ನು ಜೈಲಿಗೆ ಹಾಕಿರುವುದು ಸೋಜಿಗವೆನಿಸುವಂತಿದೆ.

ವೋಟಿಗಾಗಿ ನೋಟು ಪ್ರಕರಣದಲ್ಲಿ ಜೈಲುಪಾಲಾಗಿರುವ ಸುಧೀಂದ್ರ ಅವರನ್ನು ಆಡ್ವಾಣಿ ಅವರು ಇಂದು ಭೇಟಿಯಾಗುವ ಕಾರ್ಯಕ್ರಮವಿದ್ದರೆ ಮತ್ತೊಂದೆಡೆ ಬಿಜೆಪಿ ಹಿರಿಯರಾದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ ಸುಧೀಂದ್ರ ಅವರನ್ನು ಜೈಲಗಟ್ಟಿದ್ದೇಕೆ ಎಂದು ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ವೋಟಿಗಾಗಿ ನೋಟು ಪ್ರಕರಣದಲ್ಲಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದ ಕುಲಕರ್ಣಿ, ಭ್ರಷ್ಟಾಚಾರವನ್ನು ಬಯಲಿಗೆ ತರಬೇಕು ಎಂಬ ಉದ್ದೇಶದಿಂದ ಈ ವಿಷಯವನ್ನು ಹೊರಗೆಡಹಿದವನೇ ತಾನು ಎಂಬ ಕಾರಣವೊಡ್ಡಿ ಮಧ್ಯಂತರ ಜಾಮೀನು ಕೋರಿದರೂ ಜಾಮೀನು ಲಭಿಸಲಿಲ್ಲ.

ಸುಧೀಂದ್ರ ಬಂಧನವಾಗುತ್ತಿದ್ದಂತೆ 'ಇಡೀ ಹಗರಣದಿಂದ ಲಾಭ ಪಡೆದವರು, ಹಗರಣದ ಸೃಷ್ಟಿಕರ್ತರ ಮೇಲೆ ಪೊಲೀಸರು ಯಾವುದೇ ಆರೋಪ ಹೊರಿಸಿಲ್ಲ. ಆದರೆ ಹಗರಣವನ್ನು ಬೆಳಕಿಗೆ ತಂದವರನ್ನೇ ಸಿಕ್ಕಿಸಲಾಗಿದೆ. ಇದು ಲಂಚಕೋರರಿಗೆ ರಕ್ಷೆ ನೀಡುವಂತಹ ನೀತಿ' ಎಂದು ಅರುಣ್‌ ಜೇಟ್ಲಿ ಕೆಂಡಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+