ಸುಧೀಂದ್ರ ಕುಲಕರ್ಣಿ ಬಂಧನ: ಕೋರ್ಟ್ ವಾದದ ಹುರುಳೇನು?

'ನಾನು ಈ ವಿಷಯವನ್ನು ಬೆಳಕಿಗೆ ತಂದವ ಅಷ್ಟೆ. ನನ್ನ ಉದ್ದೇಶ ಭಾರೀ ಪ್ರಮಾಣದ ಭ್ರಷ್ಟಾಚಾರವನ್ನು ಬಯಲಿಗೆ ತರುವುದಾಗಿತ್ತು' ಎಂದು ವಕೀಲ ಮಹಿಪಾಲ್ ಸಿಂಗ್ ಮೂಲಕ ಸಲ್ಲಿಸಲಾದ ತನ್ನ ಮಧ್ಯಂತರ ಜಾಮೀನು ಅರ್ಜಿಯಲ್ಲಿ ಸುಧೀಂದ್ರ ಹೇಳಿದರು.
'ಓರ್ವ ವ್ಯಕ್ತಿಯ ಮಾಮೂಲಿ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗ ಹಾಗೂ ತನಿಖೆಯ ವೇಳೆ ಆತ ಬಂಧನಕ್ಕೊಳಗಾಗದಿದ್ದರೆ, ಆ ವ್ಯಕ್ತಿಗೆ ಮಧ್ಯಂತರ ಜಾಮೀನು ನಿರಾಕರಿಸಲು ಯಾವುದೇ ಕಾರಣವಿಲ್ಲ' ಎಂದು ಅವರು ವಾದಿಸಿದರು. 'ತನಿಖಾ ಸಂಸ್ಥೆ ಕರೆ ಕಳುಹಿಸಿದಾಗಲೆಲ್ಲ ನಾನು ಅದರೆದುರು ಹಾಜರಾಗುತ್ತಿದ್ದೆ. ಈಗ ನನ್ನನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಲು ಬೇಕಾಗುವ ಕನಿಷ್ಠ ಆವಶ್ಯಕತೆಯೇನು' ಎಂದೂ ಅವರು ಪ್ರಶ್ನಿಸಿದರು.
ಪ್ರಾಸಿಕ್ಯೂಶನ್ ವಾದಕ್ಕೆ ವಿರೋಧ ವ್ಯಕ್ತಪಡಿಸಿದ ಆರೋಪಿ ಪರ ವಕೀಲ ಸಿಂಗ್, ಈ ಇಡೀ ಪ್ರಕರಣದಲ್ಲಿ ಕುಲಕರ್ಣಿ ಯಾರಿಂದಲೂ ಹಣ ಪಡೆದಿಲ್ಲ ಹಾಗೂ ಯಾರಿಗೂ ಹಣ ಕೊಟ್ಟಿಲ್ಲ ಎಂದರು.
'ನನ್ನ ಉದ್ದೇಶ ಹಣವನ್ನು ನನ್ನ ಸ್ವಂತ ಉದ್ದೇಶಕ್ಕೆ ಬಳಸುವುದಾಗಿದ್ದರೆ ಅದನ್ನು ಸಂಸತ್ತಿನಲ್ಲಿ ತೋರಿಸುತ್ತಿರಲಿಲ್ಲ. ವಾಸ್ತವವಾಗಿ ಅದು ಒಂದು ಕೋಟಿ ರೂಪಾಯಿಯ ವ್ಯವಹಾರವಲ್ಲ, ಬದಲಿಗೆ 9 ಕೋಟಿ ರೂ. ವಹಿವಾಟು. ಲಂಚದ ಹಣವನ್ನು ನಾನು ಪಡೆಯುವುದಾಗಿದ್ದರೆ ಇನ್ನೂ 8 ಕೋಟಿ ರೂ. ಹಣವನ್ನು ನಾನು ಪಡೆಯುತ್ತಿದ್ದೆ' ಎಂದು ಹೇಳಿದರು.












Click it and Unblock the Notifications