ದೇವೇಗೌಡರ ಫ್ಯಾಮಿಲಿ ಫುಲ್ ಭೂ ಕಳ್ಳರು!

ಭವಾನಿ ಹಾಗೂ ಅವರ ಮಕ್ಕಳು ಭೂ ಸುಧಾರಣಾ ಕಾಯ್ದೆ ಉಲ್ಲಂಘಿಸಿ ಹೊಳೆನರಸೀಪುರ ತಾಲೂಕಿನಲ್ಲಿ ಅಕ್ರಮವಾಗಿ 17 ಎಕರೆ, 27 ಗುಂಟ ಭೂಮಿಯನ್ನು ಖರೀದಿಸಿದ್ದಾರೆ.
ಕೇತಿ ಮಾರನಹಳ್ಳಿ ಹಾಗೂ ಬಿಡೈ ಹೋಬಳಿಯಲ್ಲಿ ದೇವೇಗೌಡರು 24 ಎಕರೆ, 31 ಗುಂಟೆ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ.
ಎಸ್ ಟಿಗಳಿಗೆ ಸೇರಿದ್ದ ಆಸ್ತಿಯನ್ನು ಖರೀದಿಸಿದ್ದ ಸಂಬಂಧಿಕೊಬ್ಬರಿಂದ ಕುಮಾರಸ್ವಾಮಿ 22 ಎಕರೆ 6 ಗುಂಟೆ ಭೂಮಿಯನ್ನು ಪಡೆದಿದ್ದಾರೆ. ಇದಲ್ಲದೆ ಬೆಂಗಳೂರಿನಲ್ಲಿ ವಿಶ್ವಭಾರತಿ ನಿವೇಶನ ಅಕ್ರಮ ಹಂಚಿಕೆ ಕೇಸ್ ಈಗಾಗಲೇ ಲೋಕಾಯುಕ್ತ ವಿಶೇಷ ನ್ಯಾಯಲಯದ ಮುಂದಿದೆ.
ಮೈಸೂರಲ್ಲೂ ಗೋಲ್ ಮಾಲ್: ಮೈಸೂರಿನ ನಿವಾಸಿಗಳು ಎಂದು ಹೇಳಿ 46 ನಿವೇಶನಗಳನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ.
ಸರಸ್ವತಿ ಪುರಂ, ಗಂಗೋತ್ರಿ, ಟಿ ಕೊಪ್ಪಳ್ ಹಾಗೂ ಕೆಸರೆ ಪ್ರದೇಶದಲ್ಲಿ ನಿವೇಶನಗಳನ್ನು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಅಕ್ರಮವಾಗಿ ಸಂಪಾದಿಸಿದ್ದು, ಇಲ್ಲಿವರೆಗೂ ಕಾಪಾಡಿಕೊಂಡು ಬಂದಿದ್ದಾರೆ.












Click it and Unblock the Notifications