ದೊಡ್ಡ ಗೌಡ್ರ ಮೇಲೆ ಗೋಮಾಳ ನುಂಗಿದ ಕೇಸ್

ಈ ಪ್ರಕರಣದ ವಿಚಾರಣೆಯನ್ನು ಅ.17ರಂದು ಕೈಗೆತ್ತಿಕೊಳ್ಳುವುದಾಗಿ ಹೇಳಿ ಹೈಕೋರ್ಟ್ ನ್ಯಾಯಾಧೀಶ ವಿ ಜಗನ್ನಾಥನ್ ಅವರು ಪ್ರಕರಣವನ್ನು ಮುಂದೂಡಿದ್ದಾರೆ.
ದೇವೇಗೌಡರ ಮೇಲಿರುವ ಆರೋಪ: ಸರ್ಕಾರಕ್ಕೆ ಸೇರಿರುವ 82 ಎಕರೆ ಹಾಗೂ 4 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡು ಬಳಸಿಕೊಳ್ಳಲಾಗಿದೆ. ಈ ಜಮೀನಿನಲ್ಲಿ ಗೋಮಾಳ, ಕೆರೆ ಏರಿ, ಇನಾಂ ಜಮೀನು ಎಲ್ಲವೂ ಸೇರಿದೆ.
ದೇವೇಗೌಡರ ಕುಟುಂಬದ ಸದಸ್ಯರಾದ ಮಗ ಬಾಲಕೃಷ್ಣ ಅವರ ಪತ್ನಿ ಕವಿತಾ, ರೇವಣ್ಣ ಹಾಗೂ ಅವರ ಪತ್ನಿ ಭವಾನಿ ಕೂಡಾ ಇದರಿಂದ ಲಾಭ ಪಡೆದಿದ್ದಾರೆ.
ಅ.8ರಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಕೋರ್ಟ್ ಗೆ ಹಾಜರಾಗುವಂತೆ ಟ್ರಯಲ್ ಕೋರ್ಟ್ ನ್ಯಾಯಾಧೀಶರು ಸಮನ್ಸ್ ಜಾರಿ ಮಾಡಿದ್ದಾರೆ.
ಅದರೆ, ದೇವೇಗೌಡರು ಸೇರಿದಂತೆ ಇತರೆ ಕುಟುಂಬ ಸದಸ್ಯರಿಗೆ ಈ ವರೆಗೂ ಸಮನ್ಸ್ ಜಾರಿ ಮಾಡಿಲ್ಲ ಏಕೆ ಎಂದು ವಿನೋದ್ ಕುಮಾರ್ ಪ್ರಶ್ನಿಸಿದ್ದಾರೆ.
ಯಾರ ಬಳಿ ಎಷ್ಟು ಅಕ್ರಮ ಭೂಮಿ ಇದೆ ನೋಡೋಣ...












Click it and Unblock the Notifications