ರೆಡ್ಡಿ ಉಳಿಸಲು ರಾಹುಲ್ ನಿಂದ ಮಾತ್ರ ಸಾಧ್ಯ

Rahul Gandhi
ಬೆಂಗಳೂರು, ಸೆ.26: ಅಕ್ರಮ ಗಣಿಗಾರಿಕೆ, ಮನಿ ಲಾಂಡರಿಂಗ್, ಅಕ್ರಮ ಆಸ್ತಿ, ವಂಚನೆ, ಬೆದರಿಕೆ ಹೀಗೆ ನಾನಾ ಆರೋಪಗಳನ್ನು ಎದುರಿಸುತ್ತಿರುವ ರಿಪಬ್ಲಿಕ್ ಆಫ್ ಬಳ್ಳಾರಿಯ ಕಿಂಗ್ ಜನಾರ್ದನ ರೆಡ್ಡಿ ಉಳಿಸಲು ಕಾಂಗ್ರೆಸ್ ಯುವರಾಜನಿಂದ ಮಾತ್ರ ಸಾಧ್ಯ ಎಂದು ಆಂಧ್ರ ಪತ್ರಿಕೆಗಳು ಸುದ್ದಿ ಹಬ್ಬಿಸುತ್ತಿದೆ.

ಇದು ರಾಜಕೀಯ ಪ್ರೇರಿತ ವರದಿ ಎನ್ನಬಹುದಾದರೂ, ಸದ್ಯದ ಪರಿಸ್ಥಿತಿಯಲ್ಲಿ ರೆಡ್ಡಿ ಸಾಮ್ರಾಜ್ಯವನ್ನು ಉಳಿಸಲು ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಗೆ ಮಾತ್ರ ಸಾಧ್ಯ ಎಂಬ ಮಾತನ್ನು ಒಪ್ಪಬೇಕಾಗುತ್ತದೆ.

ಲೋಕಸಭೆ ಚುನಾವಣೆ 2014ರ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಈಗಲೇ ತಯಾರಿ ನಡೆಸಿದೆ. ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಇನ್ನೂ ರೆಡ್ಡಿ ಹಾಗೂ ಶ್ರೀರಾಮುಲು ಪ್ರಭಾವ ಎದ್ದು ಕಾಣುತ್ತಿದ್ದು, ಈ ಬಗ್ಗೆ ರಾಷ್ಟ್ರೀಯ ಸುದ್ದಿ ವಾಹಿನಿಗಳ ವರದಿಯನ್ನು ರಾಹುಲ್ ತರಿಸಿಕೊಂಡು ವಿಶ್ಲೇಷಣೆ ನಡೆಸಿದ್ದಾರೆ.

ದಕ್ಷಿಣದಲ್ಲಿ ರೆಡ್ದಿಗಳ ಕೈ ಬಲ: ಆಂಧ್ರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಸ್ಥಾಪನೆ ಸ್ಥಿರಗೊಳಿಸಲು ರೆಡ್ಡಿಗಳನ್ನು ಬಳಸಿಕೊಳ್ಳಲು ರಾಹುಲ್ ಚಿಂತಿಸಿದ್ದಾರೆ. ಇದು ಕೆಪಿಸಿಸಿಗೂ ಸಹ ತಿಳಿದಿಲ್ಲ ಎನ್ನಲಾಗಿದೆ.

ರೆಡ್ಡಿಗಳು ಕಾಂಗ್ರೆಸ್ ಪಕ್ಷ ಸೇರದಿದ್ದರೂ, ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಮಾಡಲು ವೇದಿಕೆ ಸಿದ್ಧವಾಗುತ್ತಿದೆ. ಇದರ ಪ್ರತಿಯಾಗಿ ರೆಡ್ಡಿಗಳ ವಿರುದ್ಧದ ಸಿಬಿಐ ತನಿಖೆ ಕುಂಠುತ್ತಾ ಸಾಗಲಿದೆ. ಜೈಲಿನಲ್ಲಿದ್ದರೂ ರೆಡ್ಡಿ ಮೈ ಯಾರು ಮುಟ್ಟದಂತೆ ನೋಡಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿದೆ.

ಕಾಂಗ್ರೆಸ್ ಡೀಲ್ ಗೆ ಕುದುರಿದ್ದು ಹೇಗೆ? ರೆಡ್ಡಿ ಒಪ್ಪಿದ್ದಾರೆಯೇ? ಮುಂದೆ ಓದಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+