ಡೀಲ್ ಗೆ ಒಪ್ಪದಿದ್ದರೆ ರೆಡ್ಡಿ ಕಥೆ ಹಾಳು ಹಂಪೆ ಸ್ಥಿತಿ

Janardahna Reddy
ಹೈದರಾಬಾದ್, ಸೆ.26: ರಾಹುಲ್ ಗಾಂಧಿ ಆಪ್ತ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ದೀಪಕ್ ಬಾಬಾರಿಯ ಇತ್ತೀಚೆಗೆ ಹೈದರಾಬಾದಿಗೆ ಭೇಟಿ ನೀಡಿದ್ದರು. 'ರೆಡ್ಡಿ ಬಚಾವೋ ಗಡ್ಡಿ ಸಂಭಾಲೋ' ಮಿಷನ್ ಗಾಗಿ ಬಂದಿದ್ದ ದೀಪಕ್, ಮಹತ್ವದ ದಾಖಲೆಗಳನ್ನು ಹೊತ್ತು ರಾಹುಲ್ ಗೆ ತಲುಪಿಸಿದ್ದಾರೆ ಎನ್ನಲಾಗಿದೆ.

ಇದೇ ಸಮಯಕ್ಕೆ ಜನಾರ್ದನ ರೆಡ್ಡಿ ಪರ ವಕೀಲರಾಗಿದ ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಲಲಿತ್ ಉದಯ್ ಅವರು ಸಿಬಿಐ ಪರ ವಿಶೇಷ ಪ್ರಾಸಿಕ್ಯೂಟರ್ ಆಗಿ ನಿಯುಕ್ತಿಗೊಂಡು 2ಜಿ ಕೇಸ್ ವಿಚಾರಣೆಗಾಗಿ ದೆಹಲಿಗೆ ತೆರಳಿದರು.

ಹೈದರಾಬಾದಿನಲ್ಲಿ ಸಿಬಿಐ ವಿರುದ್ಧ ವಾದ ಮಂಡಿಸಿದ್ದ ವಕೀಲ ಉದಯ್, ದೆಹಲಿಯಲ್ಲಿ ಸಿಬಿಐ ಪರ ವಕೀಲರಾಗಿ ಹೋಗಿದ್ದಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.

ಆದರೆ, ಇದೆಲ್ಲವೂ ರಾಹುಲ್ ಗಾಂಧಿ ಎಂಬ ಯುವ ನೇತಾರ ಆಡಿಸುತ್ತಿರುವ ನಾಟಕ ಎಂಬುದು ಯಾರಿಗೂ ತಿಳಿದಂತೆ ಹೋಯಿತು. ಕಾಂಗ್ರೆಸ್ ಪರವಾಗಿರುವ ಸಿಬಿಐಗೆ ರಾಹುಲ್ ಕೊಟ್ಟಿರುವ ನಿರ್ದೇಶನದಂತೆ ರೆಡ್ಡಿ ಇನ್ನೂ ಕೆಲ ತಿಂಗಳು ಜೈಲಿನಲ್ಲಿರಬೇಕಾಗುತ್ತದೆ.

ರಾಹುಲ್ ತಂತ್ರ: ಆದರೆ, ರೆಡ್ಡಿ ವಿರುದ್ಧದ ತನಿಖೆಗಳು ನಿಧಾನಗತಿಯಲ್ಲಿ ಸಾಗುತ್ತಾ, ಜನಮಾನಸದಿಂದ ಮರೆಯಾಗುವಂತೆ ನೋಡಿಕೊಳ್ಳಲಾಗುತ್ತದೆ. ಲೋಕಸಭೆ ಚುನಾವಣೆ ನಿಮಿತ್ತ ಅಗತ್ಯ ಬಿದ್ದಾಗ ರೆಡ್ಡಿಯನ್ನು ಕರೆಸಿಕೊಂಡು ಕಾಂಗ್ರೆಸ್ ಪರ ಪ್ರಚಾರಕ್ಕೆ ಬಳಸಿಕೊಳ್ಳುವುದು ರಾಹುಲ್ ತಂತ್ರ.

ಆದರೆ, ಇದು ಯಾವುದಕ್ಕೂ ರೆಡ್ಡಿಗಳು ಒಪ್ಪದಿದ್ದರೆ, ಈಗಾಗಲೇ ಸುಪ್ರೀಂಕೋರ್ಟ್ ಆದೇಶದಂತೆ ಅಕ್ರಮ ಆಸ್ತಿ ತನಿಖೆ ನಡೆಸಲು ಸಿಬಿಐ ಸಜ್ಜಾಗುತ್ತಿದೆ. ಇದಲ್ಲದೆ, ನೆನೆಗುದಿಗೆ ಬಿದ್ದಿರುವ ಬಹುತೇಕ ಬಿಜೆಪಿ ನಾಯಕರ ಮೇಲೆ ಮಾತ್ರ ಆರೋಪ ಹೊರೆಸಲಾಗಿರುವ ಲೋಕಾಯುಕ್ತರ ಅಕ್ರಮ ಗಣಿಗಾರಿಕೆ ವಿರುದ್ಧ ತನಿಖೆಗೆ ರಾಜ್ಯಪಾಲರು ಸರ್ಕಾರವನ್ನು ಒತ್ತಾಯಿಸಬಹುದು.

ರೆಡ್ಡಿಗಳ ಮೇಲೆ ಕೇಸ್ ಮೇಲೆ ಕೇಸ್ ಜಡಿದು ಮತ್ತೆ ಮೇಲೇಳದಂತೆ ಮಾಡುವುದು ಕಾಂಗ್ರೆಸ್ ಹುನ್ನಾರ. ಯಾವುದಕ್ಕೂ ಅಕ್ಟೋಬರ್ ಮೊದಲ ವಾರದ ನಂತರ ಕಾಂಗ್ರೆಸ್ ಹಾಗೂ ರೆಡ್ಡಿಗಳ ಮೈತ್ರಿ ವಿಚಾರದ ಊಹಾಪೋಹ ಕಥೆಗಳಿಗೆ ಸ್ಪಷ್ಟ ಚಿತ್ರಣ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+