ಕಾರಿನಲ್ಲಿ ಕಾಮದಾಟಕ್ಕೆ 87 ತಿಂಗಳ ಶಿಕ್ಷೆ

ವಾರ್ ಕ್ರಾಫ್ಟ್ ಎಂಬ ಆನ್ ಲೈನ್ ಆಟದಲ್ಲಿ ಸಹ ಆಟಗಾರನಾಗಿದ್ದ 15 ವರ್ಷದ ಯುವಕನ ಮೇಲೆ ಮೋಡಿ ಮಾಡಿ ತನ್ನ ಬಳಿಗೆ ಕರೆಸಿಕೊಂಡು ಚಕ್ಕಂದ ಆಡಲು ಆರಂಭಿಸಿದ್ದ 35 ವರ್ಷದ ಮಹಿಳೆ ಏಂಜಿ ಜೆಂಕಿನ್ಸ್ ಈಗ 7 ವರ್ಷಗಳ ಕಾಲ ಜೈಲಿನಲ್ಲಿರಬೇಕಾಗಿದೆ.
ಬಾಲಕನ ಕಾಮಪಾಶಕ್ಕೆ ಸಿಕ್ಕಿದ ಮಹಿಳೆ, ಬಫೆಲ್ಲೋ ನಗರಕ್ಕೆ ಬಂದಿದ್ದಳು. ಆದರೆ, ಬಾಲಕನ ಮೊಬೈಲಿಗೆ ಬೇರೆ ರಾಜ್ಯದಿಂದ ಒಂದೇ ಸಮನೆ ಮೊಬೈಲ್ ಕರೆಗಳು ಬರುವುದನ್ನು
ಸೂಕ್ಷ್ಮವಾಗಿ ಗಮನಿಸಿದ ಪೋಷಕರು ಪೊಲೀಸರಿಗೆ ಸುಳಿವು ನೀಡಿದರು.
ಈ ನಡುವೆ ಜೆಂಕಿನ್ಸ್ ಬಯಕೆಯಂತೆ ಬಾಲಕ ಅವಳಿಗೆ ಅಶ್ಲೀಲ ಚಿತ್ರ ಕಳಿಸುತ್ತಿದ್ದ. ಆಕೆ ಕೂಡಾ ಆತನಿಗೆ ಮೇಸೇಜ್ ಗಳು, ಎಂಎಂಎಸ್ ಗಳನ್ನು ಕಳಿಸುತ್ತಿದ್ದಳು. ನನ್ನ ಜೊತೆ ಬಂದು ಬೀಡು ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಸುಖದ ಜೀವನ ನಮ್ಮದಾಗಲಿ ಎಂದು ಮೇಸೆಜ್ ಕಳಿಸಿದ್ದು ಪೊಲೀಸರಿಗೆ ಸಿಕ್ಕಿ ಬಿಟ್ಟಿತ್ತು.
ಆದರೆ, ಇಬ್ಬರ ನಡುವೆ ಸರಸ ಸಂಭಾಷಣೆ ಎಗ್ಗಿಲ್ಲದೆ ಸಾಗಿತ್ತು. ಒಂದು ದಿನ ಯುವಕನನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ, ಮಳಿಗೆಯೊಂದರ ಪಾರ್ಕಿಂಗ್ ಲಾಟಿನಲ್ಲಿ ರಾಸಲೀಲೆ ನಡೆಸಿದ್ದಾಗ ಪೊಲೀಸರ ಕೈಲಿ ಸಿಕ್ಕಿಬಿದ್ದಿದ್ದರು.












Click it and Unblock the Notifications