ಮಹಿಳೆ ಸ್ನಾನದ ವಿಡಿಯೋ ತೆಗೆದ ಬ್ರಿಟನ್ ವೈದ್ಯ ಬಾಳಿಗಾಗೆ ಸಜೆ

'33 ವರ್ಷದ ವಿವೇಕ್ ಬಾಳಿಗಾ ಹವ್ಯಾಸ ಎಲ್ಲರನ್ನು ದಂಗುಬಿಡಿಸುವಂತಿದೆ. ಬಾಧಿತರು ಇದರ ಬಗ್ಗೆ ತುಂಬಾ ನೊಂದಿದ್ದಾರೆ' ಎಂದು ಲೀಡ್ಸ್ ಕ್ರೌನ್ ಕೋರ್ಟಿನ ನ್ಯಾಯಾಧೀಶರು ತೀರ್ಪು ನೀಡುವ ವೇಳೆ ಹೇಳಿದ್ದಾರೆ.
ಜತೆಗೆ, 10 ವರ್ಷಗಳ ಅವಧಿಯಲ್ಲಿ ಬಾಧಿತರನ್ನು ಬಾಳಿಗಾ ಸಂಪರ್ಕಿಸಬಾರದು ಹಾಗೂ ಆರೋಪಿಯು ಚಿತ್ರೀಕರಣ ಮಾಡುವಂತಹ ಯಾವುದೇ ಸಾಧನಗಳನ್ನು ಮುಟ್ಟುವಂತಿಲ್ಲ ಎಂದು ನ್ಯಾಯಾಲಯ ಸೂಚಿಸಿದೆ.
2007 ಮತ್ತು 2009 ನಡುವಣ ಅವಧಿಯಲ್ಲಿ ಪಿಎಚ್ ಡಿ ವ್ಯಾಸಂಗ ಮಾಡುತ್ತಿದ್ದ ಆರೋಪಿ ಬಾಳಿಗಾ, ಮಹಿಳಾ ವೈದ್ಯರ ಅಶ್ಲೀಲ ಚಿತ್ರಗಳನ್ನು ತೆಗೆದು ತನ್ನ ಲ್ಯಾಪ್‌ಟಾಪ್‌ನಲ್ಲಿ ದಾಖಲಿಸಿಡುತ್ತಿದ್ದ. ಅನುಮಾನ ಬಂದು ಒಮ್ಮೆ ಮಹಿಳಾ ವೈದ್ಯರೊಬ್ಬರು ಆರೋಪಿಯ ಲ್ಯಾಪ್‌ಟಾಪ್ ಜಾಲಾಡಿದಾಗ ಪ್ರಕರಣ ಬೆಳಕಿಗೆ ಬಂದಿತು ಎನ್ನಲಾಗಿದೆ.












Click it and Unblock the Notifications