ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಗಾರಿಕೆಯು ಪರಿಸರದ ಮೇಲಿನ ಅತ್ಯಾಚಾರ: ಅಶೋಕ್ ಬಣ್ಣನೆ

By Srinath
|
Google Oneindia Kannada News

mining-rape-on-environment-r-ashok
ಬೆಂಗಳೂರು, ಸೆ.22: ಅತ್ತ 'ಪರಿಸರ ನಾಶಕ್ಕೆ ಗಣಿ ಧೂಳು ಕಾರಣ' ಎಂಬ ಸರಳ ಸತ್ಯವನ್ನು ನಾಡಿನ ಸನ್ಮಾನ್ಯ ಮುಖ್ಯಮಂತ್ರಿ ಕಂಡುಕೊಂಡಿದ್ದರೆ ಅದೇ ವೇದಿಕೆಯಲ್ಲಿ ಅವರ ಸಂಪುಟ ಸಹೋದ್ಯೋಗಿ, ಗೃಹಖಾತೆಯಂತಹ ಮಹತ್ತರ ಖಾತೆ ವಹಿಸಿಕೊಂಡಿರುವ ಆರ್. ಅಶೋಕ ಮಹಾರಾಜರು ಗಣಿಗಾರಿಕೆಯನ್ನು ಪರಿಸರದ ಮೇಲೆ ನಡೆಯುತ್ತಿರುವ ಅತ್ಯಾಚಾರ ಎಂದು ಬಣ್ಣಿಸಿದ್ದಾರೆ!

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ್ ಅವರು ಗಣಿಗಾರಿಕೆ ವಿಚಾರವನ್ನು ಪ್ರಸ್ತಾಪಿಸುತ್ತ ನಮಗೆ ತಿಳಿದೋ-ತಿಳಿಯದೆಯೋ ವಿವಿಧ ರೀತಿಯಲ್ಲಿ ಪರಿಸರದ ಮೇಲೆ ಅತ್ಯಾಚಾರ ಮಾಡುತ್ತಿದ್ದೇವೆ ಎಂಬ ಅಪ್ಪಟ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಸಮಾರಂಭದಲ್ಲಿ ವಾಸವದತ್ತ ಸಿಮೆಂಟ್ ಕಾರ್ಖಾನೆ ಸೇಡಂ, ಬನ್ನಾರಿ ಅಮ್ಮನ್ ಶುಗರ್ಸ್‌ ಲಿ. ನಂಜನಗೂಡು, ಲಲಿತಾದ್ರಿ ಕಾಫಿ ಎಸ್ಟೇಟ್, ಚಿಕ್ಕಮಗಳೂರು ಹಾಗೂ ಮರಡಿ ಎಕೋ ಇಂಡಸ್ಟ್ರೀಸ್ ರಾಮನಗರ ಈ ಸಂಸ್ಥೆಗಳಿಗೆ 2011ನೆ ಸಾಲಿನ ಪರಿಸರ ಉತ್ಕೃಷ್ಟತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಪರಿಸರ ಮತ್ತು ಜೀವಶಾಶ್ತ್ರ ಇಲಾಖೆ ಸಚಿವ ಕೃಷ್ಣ ಜೆ. ಪಾಲೇಮಾರ್ ವಹಿಸಿದ್ದರು. ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್, ಸಂಸದ ಡಿ.ಬಿ. ಚಂದ್ರೇಗೌಡ, ಮಂಡಳಿ ಅಧ್ಯಕ್ಷ ಎ.ಎಸ್. ಸದಾಶಿವಯ್ಯ, ಪರಿಸರ, ಜೀವಶಾಸ್ತ್ರ ಇಲಾಖೆ ಕಾರ್ಯದರ್ಶಿ ಕನ್ವರ್ ಪಾಲ್ ಮತ್ತಿತರರು ಉಪಸ್ಥಿತರಿದ್ದರು.

English summary
Karnataka Home Minister R Ashok has said that mining is nothing but rape on environment. Interestingly Karnataka CM has also said that Mining is the root cause of environtal degradation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X