ಒಂದೇ ರಾತ್ರಿ ಎಂಟು ಹೆಣ್ಣುಗಳ ಜೊತೆ,,,

ಇಟಲಿಯಲ್ಲಿ ನಡೆದಿರುವ ಅವ್ಯಾಹತ ವೇಶ್ಯಾವಾಟಿಕೆ ಜಾಲದ ತನಿಖೆ ಸಂದರ್ಭದಲ್ಲಿ ಪ್ರಧಾನಿಯ ರಾಸಲೀಲೆ ಪ್ರಕರಣಗಳ ವಿಡಿಯೋಗಳು ಸಹ ಲೀಕ್ ಆಗಿದೆ. ಈಗಾಗಲೇ ಪ್ರಧಾನಿ ಸಿಲ್ವಿಯೋಗೆ ಹೆಣ್ಣುಗಳನ್ನು ಪೂರೈಸುತ್ತಾ ಪಿಂಪ್ ಕೆಲ್ಸವನ್ನೇ ಫುಲ್ ಟೈಮ್ ಆಗಿ ಮಾಡುತ್ತಿದ್ದ ಉದ್ಯಮಿ ಗಿನಾಪೋಲೋ ತರಾಂತಿನಿಯನ್ನು ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ರಾಜೀನಾಮೆ ಇಲ್ಲ: ಆದರೆ, ಲೈಂಗಿಕ ಹಗರಣದ ಆರೋಪ ಕೇಳಿ ಬಂದರೂ 74 ವರ್ಷದ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಅಂಜಲಿನೋ ಅಲ್‌ಫಾನೋ ಹೇಳಿದ್ದಾರೆ. ಆಂಜಲಿನೋ ಬೆರ್ಲುಸ್ಕೋನಿ ಅವರ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿದೆ.
ಮಾಧ್ಯಮಗಳ ಅಪಹಾಸ್ಯಕ್ಕೆ ಉತ್ತರಿಸಿರುವ ಪ್ರಧಾನಿ, ನನ್ನ ಖಾಸಗಿ ಜೀವನ ಕ್ರೈಮ್ ಏನಲ್ಲ. ನನ್ನ ಜೀವನಶೈಲಿ ಹೆಚ್ಚು ಜನರಿಗೆ ಇಷ್ಟವಾಗುವುದಿಲ್ಲ. ಅದು ನನ್ನ ವೈಯಕ್ತಿಕ ಬದುಕು ಎಂದು ಹೇಳಿದ್ದಾರೆ.
ಪ್ರಧಾನಿ ಸಿಲ್ವಿಯೋ ಜೀವನ ಶೈಲಿ ಅನೇಕರಿಗೆ ಹೊಟ್ಟೆ ಉರಿ ಜಾಸ್ತಿ ಹಾಗಾಗಿ, ಆಗಾಗ ಅವರ ಮೇಲೆ ಆರೋಪಗಳು ಕೇಳಿಬರುತ್ತದೆ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಯರ್ ಪುಟಿನ್ ಅವರು ಸ್ವಿಲಿಯೋರನ್ನು ಬೆಂಬಲಿಸಿದ್ದರು.












Click it and Unblock the Notifications