ಎರಡನೇ ದಿನಕ್ಕೆ ಕಾಲಿಟ್ಟ ಮೋದಿ ಸದ್ಭಾವನಾ ಉಪವಾಸ

narendra-modi
ಬೆಂಗಳೂರು, ಸೆ.18: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸದ್ಭಾವನಾ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಗುಜರಾತಿನ ವಿಶ್ವವಿದ್ಯಾನಿಲಯದ ಕನ್ವೆಷನಲ್ ಸೆಂಟರ್ ನಲ್ಲಿ ಬೀಡುಬಿಟ್ಟಿರುವ ಮೋದಿ, ಅವರ ಈ ಸಾಮಾಜಿಕ ಚಟುವಟಿಕೆಗೆ ಯಾರನ್ನೂ ಅವಲಂಬಿಸಲು ಇಷ್ಟಪಡುತ್ತಿಲ್ಲ.

ಈ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಿರುವ ಅವರು ಸಾಮಾಜಿಕ ತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟ್ಟರ್ ಮೂಲಕ ಜನರನ್ನು ತಲುಪಲು ನಿರ್ಧರಿಸಿದ್ದಾರೆ. ಟ್ವಿಟ್ಟರ್ ನಲ್ಲಿರುವ ಅವರ ಸ್ವಂತ ಖಾತೆ @narendramodi ಮತ್ತು ಫೇಸ್ ಬುಕ್ ನ ಈವೆಂಟ್ ಪೇಜ್ " ಸದ್ಭಾವನಾ ಮಿಷನ್ " ಮತ್ತು " ಪ್ರಧಾನ ಮಂತ್ರಿ ಹುದ್ದೆಗೆ ನರೇಂದ್ರ ಮೋದಿ" ಎಂಬಲ್ಲಿ ಸಾರ್ವಜನಿಕರು ಸಂಪರ್ಕಿಸಬಹುದು. ಇಷ್ಟೇ ಅಲ್ಲ, ದೇಶದಾದ್ಯಂತ ಇರುವ ಪ್ರಜೆಗಳು ಈ 022-61550770 (toll-free) ನಂಬರಿಗೆ ಮಿಸ್ ಕಾಲ್ ಮಾಡುವ ಮೂಲಕ ಕೂಡ ಈ 'ಸದ್ಭಾವನಾ ಮಿಷನ್'ಗೆ ಬೆಂಬಲ ಸೂಚಿಸಬಹುದು.

ದೇಶದಲ್ಲಷ್ಟೇ ಅಲ್ಲದೇ ಸಾಗರದಾಚೆಯಿಂದಲೂ ಮೋದಿಯವರ ಈ ಸದ್ಭಾವನಾ ಉಪವಾಸಕ್ಕೆ ಬಹಳಷ್ಟು ಬೆಂಬಲ ವ್ಯಕ್ತವಾಗಿರುವುದು ಗಮನಾರ್ಹವಾಗಿದೆ. ಅವರ ವಿರುದ್ಧ ಮಾಡಿರುವ '2002ರ ಹಿಂಸಾಕೃತ್ಯಗಳಿಗೆ ಭಾಗಿ'ಯಾಗಿರುವ ಆರೋಪಕ್ಕೆ ಪ್ರತಿಯಾಗಿ ಮೋದಿ ತೋರಿಸುತ್ತಿರುವ ಸಹನೆ, ಧೈರ್ಯ ಹಾಗೂ ದೂರದೃಷ್ಟಿಯುಳ್ಳ ಆತ್ಮಸ್ಥೈರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಅವರ ದೂರದೃಷ್ಟಿ, ದಣಿವರಿಯದ ಮಹಾನ್ ಕೆಲಸ-ಕಾರ್ಯಗಳು ಹಾಗೂ ಗುಜರಾತ್ ರಾಜ್ಯದಲ್ಲಾಗಿರುವ ಸಮಗ್ರ ಅಭಿವೃದ್ಧಿ ದೇಶದಲ್ಲೆಡೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಗಮನಸೆಳೆಯುವಲ್ಲಿ ಸಫಲವಾಗಿದೆ ಎಂದು ಎಲ್ಲೆಡೆ ಚರ್ಚೆಯಾಗುತ್ತಿರುವುದು ಗಮನಿಸಬೇಕಾದ ಸಂಗತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+