ರೆಡ್ಡಿ ಆಪ್ತೆ ಸುಷ್ಮಾ ಕೆಡವಲು ಸಿಬಿಐನಿಂದ ಖೆಡ್ಡಾ ರೆಡಿ

ಜನಾರ್ದನ ರೆಡ್ಡಿ ಮಾನಸಿಕ ಸ್ಥಿರತೆ ಕಂಡು ಸಿಬಿಐ ತಂಡಕ್ಕೆ ಅಚ್ಚರಿಯಾಗಿದೆ. ಆದರೆ, ವಿಚಾರಣಾಧೀನ ಖೈದಿಯಾಗಿರುವ ರೆಡ್ಡಿಗಳನ್ನು ವಕೀಲ ಸಮ್ಮುಖದಲ್ಲಿ ಮಾತ್ರ ವಿಚಾರಣೆ ನಡೆಸಬೇಕು ಎಂಬ ಕೋರ್ಟ್ ಆದೇಶ ಇರುವುದರಿಂದ ಸಿಬಿಐ ತನಿಖೆ ನಿಧಾನಗತಿಯಲ್ಲಿ ಸಾಗಿದೆ.
ರೆಡ್ಡಿ ಬಾಯ್ಬಿಟ್ಟ ಹೆಸರುಗಳು ಯಾರದು?: ಬಿಜೆಪಿ ಮತ್ತು ಕಾಂಗ್ರೆಸಿಗರ ಹೆಸರುಗಳು ಇದರಲ್ಲಿ ಒಳಗೊಂಡಿದ್ದು, ಎರಡೂ ಪಕ್ಷದ ನಾಯಕರಲ್ಲಿ ತಳಮಳ ಉಂಟಾಗಿದೆ. ಕೆಲವರು ಈಗಾಗಲೇ ವಿದೇಶ ಪ್ರವಾಸಗೈದಿದ್ದಾರೆ.
ಅಪರೇಷನ್ ಕಮಲಕ್ಕೆ ಕೂಡಾ ಗಣಿ ದುಡ್ಡು ಬಳಕೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ಪಕ್ಷಾಂತರ ಮಾಡಿದ ನಾಯಕರ ಮೇಲೂ ಸಿಬಿಐ ಕಣ್ಣು ಬಿದ್ದಿದೆ.
ಸುಷ್ಮಾ ವಿಚಾರಣೆ ಮಾಡ್ತೀರಾ?: ರೆಡ್ಡಿಗಳೊಂದಿಗೆ ಆಂಧ್ರಪ್ರದೇಶದ ಪ್ರಮುಖ ರಾಜಕಾರಣಿಗಳು ಶಾಮೀಲಾಗಿದ್ದಾರೆ. ಹಾಲಿ ಸಚಿವರು ಕೆಲವರು ಈಗಾಗಲೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕರ್ನಾಟಕ ಅಷ್ಟೇ ಅಲ್ಲದೆ ಕೇಂದ್ರದ ಪ್ರಮುಖ ರಾಜಕಾರಣಿಗಳು ಶಾಮೀಲಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಒಂದು ವೇಳೆ ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಅವರು ಈ ಕೇಸಿನಲ್ಲಿ ಶಾಮೀಲಾಗಿರುವ ಬಗ್ಗೆ ಸುಳಿವು ಸಿಕ್ಕರೆ ನಾವು ವಿಚಾರಣೆಗೆ ಕರೆ ತರುತ್ತೇವೆ ಎಂದು ಸಿಬಿಐ ಜಂಟಿ ನಿರ್ದೇಶಕ (ಹೈದರಾಬಾದ್ ವಲಯ) ವಿವಿ ಲಕ್ಷೀನಾರಾಯಣ ಹೇಳಿದ್ದಾರೆ.
ಇತ್ತೀಚೆಗೆ ರೆಡ್ಡಿಗಳಿಂದ ಚಿನ್ನದ ಖಡ್ಗ ಪಡೆದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮೇಲೂ ಸಿಬಿಐ ಕಣ್ಣು ಬಿದ್ದಿದೆ.
ಕಾಂಗ್ರೆಸ್ ನಾಯಕರು ಶಾಮೀಲು: ಈ ಕೇಸಿನಲ್ಲಿ ಬಿಜೆಪಿ ನಾಯಕರಲ್ಲದೆ, ಕಾಂಗ್ರೆಸ್ ನಾಯಕರೂ ಸಂಪರ್ಕ ಹೊಂದಿದ್ದಾರೆ. ದಾಖಲೆ ಸಂಗ್ರಹ ಕಾರ್ಯ ಸಾಗಿದೆ, ಅಗತ್ಯ ಪುರಾವೆ ಸಿಕ್ಕ ತಕ್ಷಣ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತೇವೆ ಎಂದು ಸಿಬಿಐ ಹೇಳಿದೆ.












Click it and Unblock the Notifications