ಸಿಂಗಾಪುರದಲ್ಲಿ ಸುಷ್ಮಾ, ಅನಂತ್ :ಬಿಜೆಪಿ ಸಮರ್ಥನೆ

BJP defends Sushma Singapore tour
ನವದೆಹಲಿ, ಸೆ.17: ಲೋಕಸಭಾ ವಿರೋಧ ಪಕ್ಷದ ನಾಯಕಿಯಾಗಿ ಸುಷ್ಮಾ ಸ್ವರಾಜ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲು ಸಿಂಗಪುರಕ್ಕೆ ತಲುಪಿದ್ದಾರೆ. ಯಾವುದೇ ವೈಯಕ್ತಿಕ ಕಾರಣಕ್ಕಾಗಿ ಅಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಬಳ್ಳಾರಿ ರೆಡ್ಡಿ ಸೋದರರಿಗೆ ಪರಮಾಪ್ತರಾಗಿರುವ ಸುಷ್ಮಾ ಸ್ವರಾಜ್ ಅವರು ಸಿಂಗಪುರಕ್ಕೆ ತೆರಳಿ, ರೆಡ್ಡಿಗಳ ಕಂಪನಿಗಳನ್ನು ಉಳಿಸಲು ಯತ್ನಿಸುತ್ತಿದ್ದಾರೆ ಎಂಬ ಊಹಾಪೋಹ ಸುದ್ದಿಗಳನ್ನು ಬಿಜೆಪಿ ತಳ್ಳಿ ಹಾಕಿದೆ.

ಅಕ್ರಮ ಗಣಿಗಾರಿಕೆ ಸಂಬಂಧ ನಿಂದ ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮುಂತಾದ ನಾಯಕರನ್ನು ಸಿಬಿಐ ಪ್ರಶ್ನಿಸುವ ಸಾಧ್ಯತೆಯಿದೆ ಎಂಬ ಸುದ್ದಿಯನ್ನೂ ಬಿಜೆಪಿ ತಳ್ಳಿ ಹಾಕಿದೆ.

ಸಿಂಗಪುರ ಪ್ರಧಾನಿ ಲೀ ಎಚ್ ಲೂಂಗ್, ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲು ಸುಷ್ಮಾ ಸ್ವರಾಜ್ ತೆರಳಿದ್ದಾರೆ.

ಸೆ.13ರಂದು ಸಿಂಗಪುರಕ್ಕೆ ಹೋಗಿದ್ದು, ನಾಲ್ಕು ದಿನದ ಪ್ರವಾಸ ಮುಗಿಸಿ ಸೋಮವಾರದೊಳಗೆ ಭಾರತಕ್ಕೆ ವಾಪಾಸ್ಸಾಗಲಿದ್ದಾರೆ.

ಭೇಟಿ ಉದ್ದೇಶವೇನು?: ಸುಷ್ಮಾ ಜೊತೆಗೆ ಸಂಸದ ಅನಂತ್ ಕುಮಾರ್, ಸಂಸದರಾದ ಚಂದನ್ ಮಿತ್ರಾ ಹಾಗೂ ಬಲ್ಬೀರ್ ಪುಂಜ್ ಕೂಡಾ ಇದ್ದಾರೆ. ನಗರಾಭಿವೃದ್ಧಿ, ಮೆಟ್ರೋ ಯೋಜನೆ ನಿರ್ವಹಣೆ ಬಗ್ಗೆ ಮಾತುಕತೆ ನಡೆಯಲಿದೆ.

ಸೆ.14 ರಂದು ಶಾಂತಿ ಹಾಗೂ ಸೌಹಾರ್ದ ದಕ್ಷಿಣ ಏಷ್ಯಾ ರಾಷ್ಟ್ರಗಲ ಸಹಯೋಗ ಎಂಬ ವಿಷಯದ ಮೇಲೆ ಸುಷ್ಮಾ ಸ್ವರಾಜ್ ಅವರು ಸಾರ್ವಜನಿಕ ಭಾಷಣ ಮಾಡಿದ್ದಾರೆ ಎಂದು ಬಿಜೆಪಿ ಸುಷ್ಮಾ ಭೇಟಿಯನ್ನು ಸಮರ್ಥಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+