ಗಣಿ ಗುಮ್ಮಕ್ಕೆ ಹೆದ್ರಿ ಸುಷ್ಮಾ, ಅನಂತ್ ಸಿಂಗಪುರಕ್ಕೆ?

ರೆಡ್ಡಿಗಳ ಸಿಂಗಪುರದ ಘಟಕಗಳನ್ನು ಉಳಿಸಲು ಅಮ್ಮ ಸುಷ್ಮಾ ಸ್ವರಾಜ್ ಸಿಂಗಪುರದ ಪ್ರವಾಸ ಕೈಗೊಂಡಿದ್ದಾರೆಯೇ? ಸುಷ್ಮಾ ಜೊತೆ ಸಂಸದ ಅನಂತ್ ಕುಮಾರ್ ಸೇರಿ ರೆಡ್ಡಿಗಳ ವಿರುದ್ಧದ ದಾಖಲೆ ನಾಶಕ್ಕೆ ಕೈ ಹಾಕಿದ್ದಾರೆಯೇ? ಎಂಬೆಲ್ಲಾ ಪ್ರಶ್ನೆಗಳು ಕಾಡತೊಡಗಿವೆ.
ಅಕ್ರಮ ಗಣಿಕಾರಿಕೆ ವ್ಯವಹಾರದಲ್ಲಿ ರೆಡ್ಡಿಗಳಿಗೆ ಬೆಂಬಲ ನೀಡಿ ಕೋಟ್ಯಂತರ ರೂಪಾಯಿ ಲಾಭ ಪಡೆದವರ ಹೆಸರನ್ನು ಸಿಬಿಐ ವಿಚಾರಣೆ ವೇಳೆ ರೆಡ್ಡಿಗಳು ಬಾಯಿ ಬಿಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.
ರೆಡ್ಡಿಗಳು ಮತ್ತು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಮಧ್ಯೆ ಕೆಲವು ತಿಂಗಳಿನಿಂದ ಒಂದು ರೀತಿ ಕಂದಕ ಉಂಟಾಗಿದೆ. ಲೋಕದ ಕಣ್ಣಿಗೆ ದೂರಾಗಿ ಉಳಿದರೂ ಸುಷ್ಮಾ ಅಮ್ಮನವರು ರೆಡ್ಡಿಗಳನ್ನು ಉಳಿಸಲು ಭಾರಿ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಓಎಂಸಿ ಕಂಪನಿಯಿಂದ ಕಬ್ಬಿಣ ಅದಿರುಗಳನ್ನು ಕಡಿಮೆ ಬೆಲೆಗೆ ಸಿಂಗಪುರ ಕಂಪನಿಗೆ ಮಾರಾಟ ಮಾಡಿ, ಕೋಟಿಗಟ್ಟಲೆ ಹಣ ಬಾಚಿಕೊಂಡ ಬಗ್ಗೆ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಿಬಿಐ ಆಂಧ್ರಪ್ರದೇಶದ ಕೃಷ್ಣಪಟ್ನಂನಲ್ಲಿರುವ ಬಂದರನ್ನು ವಶಕ್ಕೆ ತೆಗೆದುಕೊಳ್ಳಲು ಚಿಂತಿಸಿದೆ. ಆ ಬಂದರಿನಿಂದ ಚೀನಾಕ್ಕೆ ಅದಿರು ರಫ್ತಾಗುತ್ತಿತ್ತು. ಅಲ್ಲಿಂದ ರೆಡ್ಡಿಗಳ ಸಿಂಗಪುರ ಘಟಕಕ್ಕೆ ತಲುಪಿಸಲಾಗುತ್ತಿತ್ತು ಎನ್ನಲಾಗಿದೆ.












Click it and Unblock the Notifications