ಗೃಹಿಣಿಯ ಮಾನಭಂಗ ಯತ್ನ: ಪೇದೆಯ ಬಂಧನ
ಹೈದರಾಬಾದ್,
ಸೆ. 15: ಗೃಹಿಣಿಯ ಮಾನಭಂಗಕ್ಕೆ ಯತ್ನಿಸಿದ ಷಮೀರ್ ಪೇಟೆಯ ಹರಿಕೃಷ್ಣ ಎಂಬ ಪೊಲೀಸ್ ಪೇದೆಯನ್ನು ಬುಧವಾರ ಬಂಧಿಸಲಾಗಿದೆ. id="toptextpromo">ಇಂದ್ರಮ್ಮ
ಕಾಲೊನಿಯಲ್ಲಿ ಶಿವಾರೆಡ್ಡಿ ಎಂಬುವವರ ಮನೆಗೆ ಸ್ನೇಹಿತ ರಾಜು ಎಂಬವನ ಜತೆ ಪೇದೆ ಹರಿಕೃಷ್ಣ ಮಂಗಳವಾರ ರಾತ್ರಿ ತೆರಳಿದ್ದ. ಬಾಗಿಲು ಬಡಿಯುತ್ತಿದ್ದಂತೆ ಮನೆಯೊಳಗಿದ್ದ ಮಹಿಳೆ ಬಾಗಿಲು ತೆರೆದಿದ್ದಾರೆ. ತಕ್ಷಣವೇ ಆ ಮಹಿಳೆಯನ್ನು ಲಾಕ್ ಮಾಡಿಕೊಂಡ ಪೇದೆ, ಅವರನ್ನು ದರದರನೆ ಹೊರಗೆಳೆದಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಮಹಿಳೆ
ಜೋರಾಗಿ ಕಿರುಚಿಕೊಂಡಾಗ ಆಕೆಯ ಗಂಡ ಮತ್ತು ನೆರೆ ಮನೆಯವರು ಬರುತ್ತಿದ್ದಂತೆ ಇಬ್ಬರೂ ಪಲಾಯನ ಮಾಡಿದ್ದಾರೆ. ಬಳಿಕ ಮಹಿಳೆಯು ತನ್ನ ಗಂಡನ ಜತೆಗೂಡಿ ಠಾಣೆಗೆ ತೆರಳಿ, ದೂರು ನೀಡಿದ್ದಾರೆ. ದೂರಿನನ್ವಯ ಪ್ರಾಥಮಿಕ ವಿಚಾರಣೆ ನಡೆಸಿದ ಪೊಲೀಸರು, ದೂರು ದಾಖಲಿಸಿಕೊಂಡು ಪೇದೆಯನ್ನು ಬಂಧಿಸಿದ್ದಾರೆ.











Click it and Unblock the Notifications