ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾ ಬಂಧನ ಅವಿವೇಕದ ಕ್ರಮ: ಅಮೆರಿಕ ಕಾಂಗ್ರೆಸ್ ವರದಿ

By Srinath
|
Google Oneindia Kannada News

anna-arrest-upa-undemocratic-us-report
ವಾಷಿಂಗ್ಟನ್ , ಸೆ.14: ವಿಕಿಲೀಕ್ಸ್ ಆಯ್ತು, ಈಗ ಅಮೆರಿಕ ಕಾಂಗ್ರೆಸ್ ನ ಸಂಶೋಧನಾ ಸೇವೆ (ಸಿಆರ್ಎಸ್) ವರದಿಗಳು ಭಾರತ ಸರಕಾರದ ಹುಳುಕುಗಳನ್ನು ಬಯಲು ಮಾಡುವ ಕಾರ್ಯದಲ್ಲಿ ತೊಡಗಿದೆ.

ಜನತೆಯನ್ನು ವಾಸ್ತವಾಂಶಗಳಿಂದ ಮರೆಮಾಚುತ್ತಿದ್ದ ಸರಕಾರಗಳಿಗೆ ಇದರಿಂದ ಮುಖಭಂಗವಾಗುತ್ತಿದ್ದರೆ 'ಛೆ! ಇಂಥಹಾ ವ್ಯವಸ್ಥೆ ಮಧ್ಯೆ ಬದುಕುತ್ತಿದ್ದೀವಾ' ಎಂದು ಜನ ಅಸಹ್ಯ ಪಟ್ಟುಕೊಳ್ಳುವಂತಾಗಿದೆ.

'ಅಣ್ಣಾ ಹಜಾರೆ ಅವರನ್ನು ಬಂಧಿಸುವ ಮೂಲಕ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಅವಿವೇಕಿ ಹಾಗೂ ಪ್ರಜಾಸತ್ತೆ ವಿರೋಧಿಯಂತೆ ವರ್ತಿಸಿತು' ಎಂದು ಸಿಆರ್ಎಸ್ ವರದಿ ಅಭಿಪ್ರಾಯಪಟ್ಟಿದೆ.

'ಭಾರತ: ದೇಶೀಯ ವಿಷಯಗಳು, ಧೋರಣಾ ನೀತಿಗಳು ಮತ್ತು ಅಮೆರಿಕ ಬಾಂಧವ್ಯ' ಕುರಿತ ತನ್ನ ವರದಿಯಲ್ಲಿ ಈ ಅಭಿಪ್ರಾಯ ನೀಡಿರುವ ವರದಿ ಭಾರತದ ಭ್ರಷ್ಟಾಚಾರ ವಿರೋಧಿ ಚಳವಳಿ ಬಗ್ಗೆ ವಿವರವಾದ ಮಾಹಿತಿ ನೀಡಿದೆ.

ಅಮೆರಿಕನ್ ಕಾಂಗ್ರೆಸ್ ನ ಸ್ವತಂತ್ರ ವಿಭಾಗವಾಗಿರುವ ಸಿಆರ್ ಎಸ್ ಅಮೆರಿಕದ ಶಾಸನಕರ್ತರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಾಲ ಕಾಲಕ್ಕೆ ಇಂತಹ ವರದಿಗಳನ್ನು ತಯಾರಿಸುತ್ತದೆ.

English summary
By jailing Anna Hazare the government looked both inept and undemocratic, a Congressional report on India has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X