2014ರ ಚುನಾವಣೆ ಬಿಜೆಪಿಗೆ ಪ್ರಶಸ್ತ: ಅಮೆರಿಕ ವರದಿ

ಇವೇ ಹಗರಣಗಳು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ದಡ ತಲುಪಿಸಲಿವೆ ಎಂದು ಅಮೆರಿಕ ಕಾಂಗ್ರೆಸ್ ನ ಸಂಶೋಧನಾ ಸೇವೆ (ಸಿಆರ್ಎಸ್) ವರದಿ ಹೇಳಿದೆ.
2011ರಲ್ಲಿ ಭಾರಿ ಮತ್ತು ಮೇಲ್ ಸ್ತರದ ಭ್ರಷ್ಟಾಚಾರ ಪ್ರಕರಣಗಳು ಬಹಿರಂಗಗೊಂಡದ್ದರಿಂದ ಭವಿಷ್ಯದಲ್ಲಿ ಜನರಲ್ಲಿ ನಕಾರಾತ್ಮಕ ಭಾವನೆಗಳು ವ್ಯಾಪಕ ಸ್ವರೂಪ ತಾಳುವ ಸಂಭವ ಇದೆ. ಬಾಬಾ ರಾಮದೇವ್ ಮತ್ತು ಅಣ್ಣಾ ಹಜಾರೆ ಇಂತಹ ಬೆಳವಣಿಗೆಗೆ ನಾಂದಿ ಹಾಡಿದ್ದಾರೆ ಎಂದು ವರದಿ ಹೇಳಿದೆ.
ನಾಗರಿಕ ಸಮಿತಿ ರೂಪಿಸಿದ ಜನ ಲೋಕಪಾಲ ಮಸೂದೆ ಪರ ಶೇಕಡಾ 80-90ರಷ್ಟು ಜನ ಇದ್ದಾರೆ ಎಂಬುದೂ ಸಿಆರ್ಎಸ್ ವರದಿಯಿಂದ ಬಹಿರಂಗವಾಗಿದೆ.
ಜೂನ್ ಆರಂಭದಲ್ಲಿ ಯೋಗಗುರು ಬಾಬಾ ರಾಮದೇವ್ ಅವರು ಕಪ್ಪುಹಣವನ್ನು ಸ್ವದೇಶಕ್ಕೆ ತರಲು ಆಗ್ರಹಿಸಿ ನಡೆಸಿದ ಸಾಮೂಹಿಕ ನಿರಶನವನ್ನು ಪ್ರಸ್ತಾಪಿಸಿರುವ ವರದಿ, ಆ ಸಂದರ್ಭದ ಪೊಲೀಸ್ ಬಲಪ್ರಯೋಗದ ಘಟನಾವಳಿಗಳನ್ನು ವಿವರವಾಗಿ ದಾಖಲಿಸಿದೆ.
ಶಾಂತಿಯುತ ಪ್ರತಿಭಟನಕಾರರ ಮೇಲೆ ಪೊಲೀಸರು ರಾತ್ರಿ ನಡೆಸಿದ ಬಲಪ್ರಯೋಗದ ಕಾರ್ಯಾಚರಣೆಯಲ್ಲಿ ಕನಿಷ್ಠ 30 ಮಂದಿ ಗಾಯಗೊಂಡಿದ್ದು, ಸರ್ಕಾರ ವ್ಯಾಪಕ ಟೀಕೆಗೆ ಗುರಿಯಾಯಿತು ಎಂಬುದನ್ನೂ ವರದಿ ಉಲ್ಲೇಖಿಸಿದೆ.












Click it and Unblock the Notifications