ವೆಬ್‌ಸೈಟ್‌ಗೆ ಯುವತಿಯ ಅಶ್ಲೀಲ ಚಿತ್ರ: ಮಹಿಳಾ ಟೆಕ್ಕಿ ಸೆರೆ

Woman techie held in Pune
ಪೂನಾ, ಸೆ.12‌: ಜವಳಿ ಅಂಗಡಿಯ ಮಾಲೀಕಳ ಅಶ್ಲೀಲ ಚಿತ್ರಗಳನ್ನು ತೆಗೆದಿದ್ದೂ ಅಲ್ಲದೆ ಮೂರು ವೆಬ್‌ಸೈಟ್‌ಗಳಿಗೆ ಅವುಗಳನ್ನು ಅಪ್ ಲೋಡ್ ಮಾಡಿದ ಆರೋಪದ ಮೇಲೆ ಇಲ್ಲಿನ ಫುರುಶುಂಗಿಯಲ್ಲಿರುವ 29 ವರ್ಷದ ಮಹಿಳಾ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.

ನನ್ನ ಹನಿಮೂನ್ ಯಾತ್ರೆ ವೇಳೆ ಜವಳಿ ಅಂಗಡಿಯ ಮಾಲೀಕಳು ನನಗಾಗಿ ಕೆಲವು ಉಡುಪುಗಳನ್ನು ಕೊಟ್ಟಿದ್ದಳು. ಅದನ್ನು ಧರಿಸಿ ನೋಡಿದಾಗ ನನಗೆ ಭಾರಿ ನಿರಾಸೆಯಾಗಿತ್ತು ಎಂದು ಮೂಲತಃ ಮುಂಬಯಿಯವಳಾದ ಆರೋಪಿ ಟೆಕ್ಕಿ ಹೇಳಿದ್ದಾಳೆ. ಎಂ.ಟೆಕ್ ಓದಿರುವ ಈಕೆ ಕಲ್ಯಾಣಿನಗರದಲ್ಲಿರುವ ಪ್ರಸಿದ್ಧ ಐಟಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದಾಳೆ.

'ಒಂದೇ ಸಮನೆ ಅನಾಮಿಕ ಕರೆಗಳು ಬರತೊಡಗಿದವು. ಇದರಿಂದ ನಾನು ಗಾಬರಿ ಬಿದ್ದೆ. ಸಾವರಿಸಿಕೊಂಡು ವಿಚಾರಿಸಿದಾಗ ನನ್ನ ಫೋಟೋಗಳು ಮತ್ತು ಮೊಬೈಲ್ ನಂಬರ್ ವೆಬ್‌ಸೈಟ್‌ಗಳಲ್ಲಿ ಕಂಡುಬಂದವು' ಎಂದು ಬಾಧಿತ ಮಹಿಳೆ ಹೇಳಿಕೊಂಡಿದ್ದಾರೆ. ಮಹಿಳೆ ಇದನ್ನು ತನ್ನ ಪತಿರಾಯನಿಗೆ ತಿಳಿಸಿದಳು. ನಂತರ, ಇಬ್ಬರೂ ಸೈಬರ್ ಕ್ರೈಂ ಪೊಲೀಸರಿಗೆ ಕಳೆದ ಬುಧವಾರ ದೂರು ನೀಡಿದ್ದರು.

ಪೊಲೀಸರು ತನಿಖೆ ನಡೆಸಿದಾಗ ಮೂರೂ ವೆಬ್‌ಸೈಟ್‌ಗಳಿಗೆ ಒಂದೇ ಐಪಿ ವಿಳಾಸವಿರುವ ಕಂಪ್ಯೂಟರಿನಿಂದ ಬಾಧಿತ ಮಹಿಳೆಯ ಅಶ್ಲೀಲ ಚಿತ್ರಗಳು ಅಪ್ ಲೋಡ್ ಮಾಡಿರುವುದು ಪತ್ತೆಯಾಗಿದೆ. ತಕ್ಷಣ ಆ ವಿಳಾಸವನ್ನು ಬೆನ್ನುಹತ್ತಿದಾಗ ಸದರಿ ಮಹಿಳಾ ಟೆಕ್ಕಿ ಬಲೆಗೆ ಬಿದ್ದಿದ್ದಾಳೆ. ಮಹಿಳೆಯನ್ನು ಬಂಧಿಸಿರುವ ಪೊಲೀಸರು, ಆಕೆಯ ಲ್ಯಾಪ್ ಟಾಪ್ ವಶಪಡಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+