ಟಿವಿ ನಿರೂಪಕಿ ಜತೆ ಒಮರ್ ಅಬ್ದುಲ್ಲಾ ಪ್ಯಾರ್ ಹೀ ಪ್ಯಾರ್

omar-abdullah-tv-anchor-love-affair
ಶ್ರೀನಗರ, ಸೆ.12‌: ದೆಹಲಿ ಪತ್ರಕರ್ತರ ವಲಯದಲ್ಲಿ 'ಕಾಶ್ಮೀರ್-ಕಿ-ಕಲಿ' ಒಮರ್ ಅಬ್ದುಲ್ಲಾ ಸುತ್ತಾ ಭಾರಿ ಗಾಳಿ ಸುದ್ದಿ ಹರಿದಾಡುತ್ತಿದೆ. ಏನಪಾ ಅಂದರೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್, ಟಿವಿ ನಿರೂಪಕಿಯ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ.

ಇದಕ್ಕಾಗಿ 41 ವರ್ಷದ ಒಮರ್, ಮೊದಲ ಪತ್ನಿಗೆ ತಲಾಖ್ ನೀಡಲೂ ಸಿದ್ಧತೆ ನಡೆಸಿದ್ದಾರೆ! ಗಮನಾರ್ಹವೆಂದರೆ ಒಮರ್ ಅವರ ಪತ್ನಿ ಪಾಯಲ್ ಸಹ ತಲಾಖ್ ಗೆ ಅಸ್ತು ಅಂದಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ ಆ ಟಿವಿ ನಿರೂಪಕಿಯೂ ಡೈವೋರ್ಸಿಯೇ. ಅಷ್ಟೇ ಅಲ್ಲ. ಡೈವೋರ್ಸಿಯಾದ ಬಳಿಕ ಇಬ್ಬರೊಂದಿಗೆ ಲಿವ್-ಇನ್ ಸಂಬಂಧವನ್ನೂ ಹೊಂದಿದ್ದಳು. ಈ ಮಧ್ಯೆ, ಒಮರ್ ಮತ್ತು ಪಾಯಲ್ ಇಬ್ಬರೂ ದೂರವಾಗಿರುವುದನ್ನು ನಿಕಟವಲಯಗಳು ಖಚಿತಪಡಿಸಿವೆ.

ಆದರೆ ಹಿರಿಯ ಅಬ್ದುಲ್ಲಾ (ಡಾ. ಫಾರೂಕ್ ಅಬ್ದುಲ್ಲಾ), ಪುತ್ರನ ಪ್ರೇಮ ವಿವಾಹಕ್ಕೆ ಬಿಲ್ ಕುಲ್ ಒಪ್ಪಿಲ್ಲ. ಯಾಕಪ್ಪಾ ಅಂದರೆ ಪುತ್ರ ಒಮರ್ ನ ಹೊಸ ಲವರ್ ಅರ್ಥಾತ್ ಸದರಿ ಟಿವಿ ನಿರೂಪಕಿ ಮುಸ್ಲಿಂ ಜನಾಂಗದವಳು ಅಲ್ಲ ಎಂಬ ಕಾರಣಕ್ಕೆ. ಆದರೆ ಹಿರಿಯ ಅಬ್ದುಲ್ಲಾ ಯಾರನ್ನು ಗೊತ್ತೇ ಮದುವೆಯಾಗಿದ್ದು? ಬ್ರಿಟನ್ನಿನ ಯುವತಿಯನ್ನು! ಇನ್ನು ಒಮರ್ ತಂಗಿ ಸರಾ ಮದುವೆಯಾಗಿರುವುದು ಸಂಸದ ಸಚಿನ್ ಪೈಲಟ್ ಅವರನ್ನು.

ದಾಖಲಾರ್ಹವೆಂದರೆ, ಮೇಜರ್ ಜನರಲ್ ರಾಮ್ ನಾಥ್ (ನಿವೃತ್ತ) ಅವರ ಪುತ್ರಿ ಪಾಯಲ್ ರನ್ನು ಕಿರಿಯ ಅಬ್ದುಲ್ಲಾ 1994ರಲ್ಲಿ ಮದುವೆಯಾಗಿದ್ದರು. 1998ರಲ್ಲಿ ಒಮರ್ ಸಕ್ರಿಯವಾಗಿ ರಾಜಕೀಯ ಪ್ರವೇಶಿಸಿದ್ದರು. ಕಳೆದ 6 ತಿಂಗಳಿಂದ ಒಮರ್ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಕಾಲಿಟ್ಟಿಲ್ಲ. ಅಲ್ಲಿ ತಮ್ಮ ಇಬ್ಬರು ಪುತ್ರರೊದಿಗೆ ಪಾಯಲ್ ವಾಸವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+