ಸಿಬಿಐನಿಂದ ಜನಾರ್ದನ ರೆಡ್ಡಿ ಆಸ್ತಿ ವಿವರ ಪ್ರಕಟ

Janardhan Reddy
ಹೈದರಾಬಾದ್, ಸೆ.11 : 45 ನೆಕ್ಲೇಸ್‌ಗಳು, 610 ವಜ್ರ ಖಚಿತ ಬಂಗಾರದ ಬಳೆಗಳು, 300 ವಜ್ರದ ಹರಳುಗಳುಳ್ಳ ಕಿವಿಯೋಲೆಗಳು, 1200 ಚಿನ್ನದ ಉಂಗುರ ...ಪಟ್ಟಿ ನೋಡುತ್ತಿದ್ದಾರೆ ಯಾವುದೋ ಚಿನ್ನಾಭರಣ ಅಂಗಡಿಯದ್ದು ಎಂದೆನಿಸುತ್ತದೆ. ಆದರೆ, ಇದು ಸಿಬಿಐ ಅಧಿಕಾರಿಗಳು ಗಣಿ ಉದ್ಯಮಿ ಜನಾರ್ದನ ರೆಡ್ಡಿ ಮನೆಯಲ್ಲಿ ವಶಪಡಿಸಿಕೊಂಡ ಆಭರಣದ ಅಸಮಗ್ರ ಪಟ್ಟಿ.

ಜನಾರ್ಧನ ರೆಡ್ಡಿಯ ಬಳ್ಳಾರಿ ಹಾಗೂ ಬೆಂಗಳೂರು ನಿವಾಸಗಳಿಂದ ವಶಪಡಿಸಿಕೊಳ್ಳಲಾದ ಸಂಪತ್ತ ಲೆಕ್ಕ ಹಾಕುವಲ್ಲಿ ಸಿಬಿಐ ಅಧಿಕಾರಿಗಳು ನಿರತರಾಗಿದ್ದಾರೆ. ಚಿನ್ನಾಭರಣಗಳ ಮೌಲ್ಯದ ಅಂದಾಜು ಇನ್ನೂ ಮುಗಿದಿಲ್ಲ.
ಬೆಂಗಳೂರು, ಬಳ್ಳಾರಿ ಮತ್ತು ಚೆನ್ನೈ ಮನೆಗಳಿಂದ ವಶಪಡಿಸಿಕೊಂಡ ವಸ್ತುಗಳ ಮೊದಲ ಪಟ್ಟಿ ಇದಾಗಿದೆ.

ಆಸ್ತಿ ವಿವರಗಳನ್ನು ದೋಷಾರೋಪ ಪಟ್ಟಿಯಲ್ಲಿ ಆದಷ್ಟು ಬೇಗ ಸೇರಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಸಿಬಿಐ ಚಿಂತನೆ ನಡೆಸಿದೆ. ಸಿಬಿಐ ಮೂಲಗಳ ಪ್ರಕಾರ, ಭೂಮಿ ಖರೀದಿ ಕೈತಪ್ಪಿದ ಮೇಲೆ ರೆಡ್ಡಿಗಳು ಹಳದಿ ಲೋಹದ ಖರೀದಿ ಮೇಲೆ ಹೆಚ್ಚು ಹಣ ತೊಡಗಿಸಿದ್ದಾರೆ.

ರೆಡ್ಡಿ ಮನೆಯಲ್ಲಿ ಎಲ್ಲವೋ ಚಿನ್ನಮಯ. ದೇವರ ಮನೆಯಿಂದ ಪಾಯಿಖಾನೆವರೆಗೂ ಚಿನ್ನದಿಂದ ಎಲ್ಲವನ್ನೂ ಅಲಂಕರಿಸಲಾಗಿದೆ. ಊಟದ ಮನೆಯಲ್ಲಿ ಎಲ್ಲವೂ ಚಿನ್ನದ ಪರಿಕರಗಳೇ ತುಂಬಿದೆ ಎಂದು ಸಿಬಿಐ ಹೇಳಿದೆ.

ಬಳ್ಳಾರಿ ಮನೆಯಲ್ಲಿ ಶುದ್ಧ ಚಿನ್ನದಿಂದ ಮಾಡಿದ 1 ಅಡಿ ಎತ್ತರದ ವೆಂಕಟೇಶ್ವರ ಮೂರ್ತಿ ಹಾಗೂ ಅರ್ಧ ಅಡಿ ಎತ್ತರದ ಪದ್ಮಾವತಿಯ ಮೂರ್ತಿ ಸಿಕ್ಕಿದೆ, 100-50 ಅಡಿ ಅಳತೆಯ ಪೂಜಾ ಮಂದಿರದಲ್ಲಿ ಇನ್ನೂ ಹಲವು ಆಭರಣ ಭರಿತ ದೇವಾನು ದೇವತೆಗಳಿದ್ದಾರೆ.

ಈಗ ಸಿಬಿಐ ವಶದಲ್ಲಿರುವ ವಸ್ತುಗಳಲ್ಲಿಕ್ 1 ಕೆ.ಜಿ ಚಿನ್ನದಿಂದ ಮಾಡಿದ ಗಂಟೆ ಕೂಡಾ ಸೇರಿದ ಗಾಲಿ ಕುಟುಂಬ ಸುಮಾರು 6 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಲಾಕರು ಖಾತೆಗಳನ್ನು ಹೊಂದಿದೆ, ಅವನ್ನು ಶೋಧಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+