ಕಾಂಬೋಡಿಯಾದ ಕಂದನಿಗೆ ಹಸುವಿನ ಕೆಚ್ಚಲಿಂದಲೇ ಅಮೃತಪಾನ

cambodian-boy-suckles-from-cow
ಸೇಮ್ ರೀಪ್ (ಕಾಂಬೋಡಿಯಾ), ಸೆ.11: ಕಾಂಬೋಡಿಯಾದಲ್ಲಿ ಬಡತನವೆನ್ನುವುದು ತಾಂವವಾಡುತ್ತಿದೆ. ಈ ಬಾಲಕನ ಅಪ್ಪ-ಅಮ್ಮ ಜೀವನೋಪಾಯಕ್ಕಾಗಿ ಥಾಯ್ಲೆಂಡಿಗೆ ಕೆಲಸಕ್ಕೆಂದು ಹೊರಟುಬಿಟ್ಟರು. ಆದರೆ ಅವರ ಕಂದನ ಹೊಟ್ಟೆಗೆ ಹಿಟ್ಟು? ಅಜ್ಜನ ಮನೆಯಲ್ಲಿ ಬೆಳೆಯುತ್ತಿರುವ ಆ ಕಂದನೋ ಹಸುವಿನ ಕೆಚ್ಚಲಿಂದಲೇ ಅಮೃತಪಾನ ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾನೆ.

20 ತಿಂಗಳ ಈ ಕಂದ (ಥಾ ಸೋಪಟ್) ಕಳೆದ ಜುಲೈನಲ್ಲಿ ಕರುವೊಂದು ಹಸುವಿನ ಕೆಚ್ಚಲಿನಿಂದ ಹಾಲು ಕುಡಿಯುತ್ತಿರುವುದನ್ನು ಕಂಡ. ಮುಂದೆ ಅಂಬೆಗಾಲಿಡುತ್ತಾ ಕರುವಿನೊಂದಿಗೆ ತಾನೂ ಕರುವಾದ. ಆ ಗೋಮಾತೆಯೋ ಕಂದನ ಅಮೃತಪಾನಕ್ಕೆ ಒಂದಿನಿತೂ ಅಡ್ಡಪಡಿಸಲಿಲ್ಲ. ಸರಿ ಅಂದಿನಿಂದ ಶುರುವಾಯಿತು ಈ ತಾಯಿ-ಮಗನ ವಾತ್ಸಲ್ಯ.

ಥಾ ಸೋಪಟ್ ಮೊದಲ ಬಾರಿ ಹಸುವಿನ ಬಳಿ ಸಾಗಿ, ಹಾಲು ಕುಡಿಯುತ್ತಿರುವುದನ್ನು ನೋಡಿ ಗಾಬರಿಗೆ ಬಿದ್ದೆ. ಮಗುವನ್ನು ದೂರ ಎಳೆದುಕೊಂಡೆ ಎಂದು ಆತನ ತಾತ ಹೇಳಿದ್ದಾರೆ. ಆದರೆ ಆತನಿಗೆ ಈಗ ಮೊಮ್ಮಗನ ಆರೋಗ್ಯದ ಬಗ್ಗೆ ಚಿಂತೆ ಕಾಡುತ್ತಿದೆ. ನೇರವಾಗಿ ಹಸುವಿನ ಹಾಲು ಕುಡಿಯುತ್ತಿರುವ ಮೊಮ್ಮಗನ ಆರೋಗ್ಯವೇನೋ ಇದುವರೆಗೆ ಕೆಟ್ಟಿಲ್ಲ. ಆದರೆ ಮುಂದೇನು ಕಾದಿದೆಯೋ ಎಂಬುದು ಆತನ ಆತಂಕ.

ಥಾ ಸೋಪಟ್ ಅಂತೂ ಇದಾವುದರ ಪರಿವೆಯೂ ಇಲ್ಲದೆ ಸ್ವಚ್ಚಂದವಾಗಿ ದಿನಕ್ಕೆರಡು ಬಾರಿ ಕೆಚ್ಚಲಿಗೆ ಬಾಯಿ ಹಾಕುತ್ತಾನೆ, ಅಮ್ಮನ ನೆನಪಿನಲ್ಲಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+