ಯಶವಂತಪುರದಲ್ಲಿ ತಾಜ್‌ ಬೃಹತ್ ಹೋಟೆಲ್ 'ವಿವಂತ'

Taj unveils Biggest Hotel in Bangalore
ಬೆಂಗಳೂರು, ಸೆ.9: ತಾಜ್ ಸಮೂಹ, ತನ್ನ ವಿವಂತ ಬ್ರ್ಯಾಂಡ್‌ನ ಮೊದಲ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಅಣಿಯಾಗಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಮತ್ತೊಂದು ಬೃಹತ್ ತಾಜ್ ವಿವಂತ ಹೋಟೆಲ್‌ಗೆ ಚಾಲನೆ ನೀಡಿದೆ.

ಯಶವಂತಪುರದಲ್ಲಿನ ಈ ಹೋಟೆಲ್, ಬೃಹತ್ ಜಾಗದಲ್ಲಿ ವ್ಯಾಪಿಸಿದೆ. ಇದರೊಂದಿಗೆ ನಗರದಲ್ಲಿ ವಿವಂತ ಸಂಖ್ಯೆ 3ಕ್ಕೆ ಹೆಚ್ಚಾಗಿದೆ. ವೈಟ್‌ಫೀಲ್ಡ್ ಹಾಗೂ ಎಂಜಿ ರಸ್ತೆಯಲ್ಲಿ ವಿವಂತ ಹೋಟೆಲ್‌ಗಳಿವೆ. ಒಟ್ಟಾರೆಯಾಗಿ ವಿವಂತ ಸಂಖ್ಯೆ 21ಕ್ಕೆ ಏರಿದೆ

ಹೋಟೆಲ್‌ಗೆ ಚಾಲನೆ ನೀಡಿ ಮಾತನಾಡಿದ ತಾಜ್ ಹೋಟೆಲ್ಸ್ ರೆಸಾರ್ಟ್ಸ್ ಆಂಡ್ ಪ್ಯಾಲೇಸಸ್ ವ್ಯವಸ್ಥಾಪಕ ಸಿರ್ದೇಶಕ ಹಾಗೂ ಸಿಇಒ ರೇಮಂಡ್ ಎನ್ ಬಿಕ್ಸನ್, 108 ವರ್ಷಗಳ ತಾಜ್ ಇತಿಹಾಸದಲ್ಲಿ ವಿವಂತ ಒಂದು ಮಹತ್ತರ ಮೈಲುಗಲ್ಲು. ಇದು ತಾಜ್‌ನ ಸಂಶೋಧನಾತ್ಮಕ ಹೆಜ್ಜೆ. ಇದು ಕಂಪನಿಯ ಬೆಳವಣಿಗೆ ಗುರಿಗೆ ಸಹಕಾರಿ. ಯಶವಂತಪುರದಲ್ಲಿನ ಈ ಹೋಟೆಲ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದ್ದು, ನಗರದ ಕೇಂದ್ರಭಾಗದಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಜ್ ಹೋಟೆಲ್ಸ್ ರೆಸಾರ್ಟ್ಸ್ ಆಂಡ್ ಪ್ಯಾಲೇಸಸ್ ಉಪಾಧ್ಯಕ್ಷೆ ದೀಪಾ ಮಿಸ್ರಾ ಹ್ಯಾರೀಸ್, ಬೆಂಗಳೂರಿನ ಸಮರ್ಪಕ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ವಿವಂತಕ್ಕೆ ಚಾಲನೆ ನೀಡಲಾಗಿದೆ. ನಗರದಲ್ಲಿನ 3ನೇ ವಿವಂತ ಇದಾಗಿದೆ ಎಂದರು.

327 ಕೋಣೆಗಳ ಈ ಹೋಟೆಲ್ ಐಷಾರಾಮಿಯ ಸಂಕೇತವಾಗಿದೆ. ವಿಮಾನನಿಲ್ದಾಣದಿಂದ 35ಕಿ.ಮೀ ದೂರದಲ್ಲಿದ್ದು, ಯಶವಂತಪುರ ರೈಲು ನಿಲ್ದಾಣದಿಂದ ನಿಮಿಷದ ಹಾದಿ ಎಂದು ತಾಜ್ ವಿವಂತ ಸಿಒಒ ವೀರ್ ವಿಜಯ್ ಸಿಂಗ್ ಹೇಳಿದರು.

* ನಗರದಿಂದ 15ಕಿ.ಮೀ ದೂರದಲ್ಲಿರುವ ಈ ಹೋಟೆಲ್,
* 3.5 ಎಕರೆ ಪ್ರದೇಶದಲ್ಲಿ ವಿಸ್ತೀರ್ಣ ಹೊಂದಿದೆ.
* 12 ಅಂತಸ್ತಿನ ಸುಂದರ ಕಟ್ಟಡ
* ಪೀಣ್ಯ ಕೈಗಾರಿಕೆ ಪ್ರದೇಶ, ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ(BIEC)ಗಳಿಗೆ ಸಮೀಪದಲ್ಲಿದೆ.
* 18000 ಚದರ ಅಡಿಯ ಕನ್ವೇಷನ್ ಹಾಲ್
* 400 ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ.
* ಕೋಣೆಗಳು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿವೆ.

ವಸತಿಯೊಂದಿಗೆ ನಾನಾ ಪ್ರದೇಶಗಳ ಊಟ, ಯೋಗ ಮೊದಲಾದ ವ್ಯವಸ್ಥೆಗಳಿವೆ. ದೇಶದ ನಾನಾ ಭಾಗಗಳನ್ನು ಬಿಂಬಿಸುವ, ನದಿ ದಡವನ್ನು ನೆನಪಿಸುವ ಖಾದ್ಯಗಳು ಇಲ್ಲಿ ಲಭ್ಯ. ಇದರ ಹೊರತಾಗಿ ಈಜುಕೋಳ ಮೊದಲಾದ ಆಧುನಿಕ ವ್ಯವಸ್ಥೆಗಳನ್ನು ಹೊಂದಿದೆ.

ತಾಜ್ ವಿವಂತ ಕುರಿತು: ಪಂಚತಾರಾ ಹೋಟೆಲ್ ಇದಾಗಿದ್ದು, ತಾಜ್ ಹೋಟೆಲ್ಸ್ ಸಮೂಹದ ಭಾಗವಾಗಿದೆ. ಪ್ರಪಂಚದಾದ್ಯಂತ 21 ವಿವಂತ ಹೋಟೆಲ್‌ಗಳಿವೆ. ಗೋವಾ,ಕೇರಳ, ರಾಜಾಸ್ತಾನ, ಶ್ರೀಲಂಕಾ ಮತ್ತು ಮ್ಯಾಲ್ಡೀವ್ಸ್‌ಗಳಲ್ಲಿ ಅಸ್ತಿತ್ವ ಹೊಂದಿದೆ.

ತಾಜ್ ಹೋಟೆಲ್ಸ್ ರೆಸಾರ್ಟ್ಸ್ ಕುರಿತು: 1903ರಲ್ಲಿ ಅಭಿವೃದ್ಧಿಗೊಂಡ ತಾಜ್ ಹೋಟೆಲ್ಸ್ ರೆಸಾರ್ಟ್ಸ್, ಏಷಿಯಾದ ಬೃಹತ್ ಆತಿಥ್ಯೋದ್ಯಮ ಸಂಸ್ಥೆಯಾಗಿದೆ. 53 ಪ್ರದೇಶಗಳಲ್ಲಿ 92 ಹೋಟೆಲ್ ಹೊಂದಿದೆ. 16 ಅಂತಾರಾಷ್ಟ್ರೀಯ ಹೋಟೆಲ್‌ಗಳನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+