ಕಟಕಟೆ ಹತ್ತಿ ನಿಂತ ಕುಮಾರಸ್ವಾಮಿ ದಂಪತಿ

ಜಂತಕಲ್ ಮೈನಿಂಗ್ ಕಂಪೆನಿ ಗುತ್ತಿಗೆ ಲೈಸನ್ಸ್ ನವೀಕರಣ ಹಾಗೂ ವಿಶ್ವಭಾರತಿ ಸೊಸೈಟಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆಕುಮಾರ ಸ್ವಾಮಿ ದಂಪತಿ ಹೈಕೋರ್ಟ್ ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ
ಅಹಾ ಏನ್ ಜೋಡಿ: ಹೀಗಾಗಿ ಬಂಧನದ ಭೀತಿಯಿಂದ ಪಾರಾಗಿರುವ ಎಚ್ ಡಿ ಕುಮಾರಸ್ವಾಮಿ ಸಣ್ಣ ಗೆರೆಯುಳ್ಳ ಬಿಳಿ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದರೆ, ದೇವೇಗೌಡ ಸೊಸೆ ಅನಿತಾ ಅವರು ಹಸಿರು ಬಣ್ಣದ ಸೀರೆಯುಟ್ಟು, ಸತ್ಯನಾರಾಯಣ ಪೂಜೆ ಬರುವಂತೆ ಕೋರ್ಟ್ ಕಡೆಗೆ ನಡೆದು ಬಂದರು.
ಆರಾಮವಾಗಿ ಸಿವಿಲ್ ಕೋರ್ಟ್ ಆವರಣಕ್ಕೆ ಬಂದ ಎಚ್ಡಿಕೆ ದಂಪತಿಗಳು ನೆರೆದಿದ್ದ ಅಭಿಮಾನಿಗಳಿಗೆ ಕೈ ಬೀಸುತ್ತಾ ಕೋರ್ಟ್ ಒಳ ಪ್ರವೇಶಿಸಿದರು. ಕೋರ್ಟ್ ಹಾಲ್ 24ರಲ್ಲಿ ನಡೆದಿರುವ ವಿಚಾರಣೆಗೆ ಹಾಜರಾಗಿ ಕಟಕಟೆಯಲ್ಲಿ ನಿಂತಿದ್ದಾರೆ.
ಬದಲಾದ ಜನರ ಕುತೂಹಲ: ಕುಮಾರಸ್ವಾಮಿ ದಂಪತಿಗಳು ಕೋರ್ಟಿಗೆ ಬರುತ್ತಾರೋ? ಇಲ್ಲವೋ? ಎಂಬ ಕುತೂಹಲ ಅಷ್ಟಾಗಿ ಜನರಲ್ಲಿ ಉಳಿದಿರಲಿಲ್ಲ. ಜಾಮೀನು ನಿರಾಕರಿಸಿದರೆ ಮಾತ್ರ ಬಂಧನದ ವಾರಂಟ್ ಜಾರಿಗೊಳಿಸಬಹುದು ಹಾಗೂ ಆರೋಪ ಮೇಲ್ನೋಟಕ್ಕ ಸಾಬೀತಾದರೆ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗಾದಂತೆ ಎಚ್ಡಿಕೆ ದಂಪತಿಗೂ ನ್ಯಾಯಾಂಗ ಬಂಧನ ಶಿಕ್ಷೆ ಆಗಬಹುದು.












Click it and Unblock the Notifications