ಬಿಹಾರ: ಭ್ರಷ್ಟ ಐಎಎಸ್ ಅಧಿಕಾರಿಯ ಬಂಗಲೆ ಶಾಲೆಯಾಯಿತು

ಆದರೆ ಬಿಹಾರದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಐಎಸ್‌ಎಸ್ ಅಧಿಕಾರಿ ಶಿವಶಂಕರ್ ವರ್ಮಾರಿಂದ 2007ರಲ್ಲಿ ವಶಪಡಿಸಿಕೊಳ್ಳಲಾಗಿದ್ದ ಬಂಗಲೆಯನ್ನು ಬಿಹಾರ ಸರ್ಕಾರ ಸರ್ವಸಜ್ಜಿತ ಪ್ರಾಥಮಿಕ ಶಾಲೆಯನ್ನಾಗಿ ಶುಕ್ರವಾರ ಪರಿವರ್ತಿಸಿದೆ.
ಮಾಜಿ ಕಿರು ನೀರಾವರಿ ಕಾರ್ಯದರ್ಶಿಯಾಗಿದ್ದ ವರ್ಮಾ 1.44 ಕೋಟಿ ಅಕ್ರಮ ಆಸ್ತಿ ಸಂಪಾದನೆ ಕುರಿತಂತೆ ಬಿಹಾರದ ವಿಶೇಷ ಕೋರ್ಟ್ ಕಾಯಿದೆಪ್ರಕಾರ ದಂಡನೆಗೆ ಗುರಿಯಾಗಿದ್ದು, ಆಸ್ತಿಯನ್ನು ವಶಪಡಿಸಿಕೊಳ್ಳುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು.
ಆ ಪ್ರಕಾರ ಬೃಹತ್ ಬಂಗಲೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಸನಿಹದ ಕೊಳೆಗೇರಿಯಲ್ಲಿದ್ದ ಶಾಲೆಯನ್ನು ಬಂಗಲೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಕಲಿಯುವ ಮಕ್ಕಳೆಲ್ಲಾ ದಲಿತರು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಮೆಧೋ ದಾಸ್ ತಿಳಿಸಿದ್ದಾರೆ.












Click it and Unblock the Notifications