ಕಾಲೇಜಲ್ಲೇ ವಿದ್ಯಾರ್ಥಿನಿ ಚೂಡಿದಾರ ಎಳೆದ ಕಾಮುಕರು

ಸೋಮವಾರ ಸಂಜೆ ಕಾಲೇಜು ಮುಗಿದು ಎಲ್ಲರೂ ಮನೆಗೆ ಹೋದ ವೇಳೆ ಮೂವರು ವಿದ್ಯಾರ್ಥಿಗಳು, ತಮ್ಮ ಜೂನಿಯರ್ ವಿದ್ಯಾರ್ಥಿನಿಯೊಬ್ಬಳನ್ನು ಎಳೆತಂದು ಕಾಲೇಜು ಟಾಯ್ಲೆಟ್ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.
ಆ ಮಲೆಯಾಳಂ ಭಾಷೆಯಲ್ಲಿ ಯಾರೋ ಹುಡುಗಿ ಜೋರಾಗಿ ಬೊಬ್ಬೆ ಹಾಕುತ್ತಿದ್ದದ್ದು ಕೇಳಿಸಿತು. ತಕ್ಷಣ ಅಲ್ಲಿಗೆ ತೆರಳಿ ಆಕೆಯನ್ನು ರಕ್ಷಿಸಲಾಯಿತು. ಯುವತಿ ತೊಟ್ಟಿದ್ದ ಚೂಡಿದಾರವನ್ನು ಬಹುತೇಕ ಬಿಚ್ಚಲಾಗಿದ್ದು, ಇನ್ನು ಕೆಲವೇ ಹೊತ್ತು ತಡೆದಿದ್ದರೆ ಆಕೆಯ ಅತ್ಯಾಚಾರವಾಗುತ್ತಿತ್ತು, ವಿದ್ಯಾರ್ಥಿಗಳ ಪತ್ತೆ ಹಚ್ಚಿ ಪೊಲೀಸರಿಗೆ ತಿಳಿಸಲಾಗಿದೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಆದರೆ, ದೂರು ಕೊಟ್ಟ ಸಿಬ್ಬಂದಿಗಳ ಮನೆ ಮೇಲೆ ಆರೋಪಿ ವಿದ್ಯಾರ್ಥಿ ಪರ ಗ್ಯಾಂಗ್ ದಾಳಿ ನಡೆಸಿದೆ. ಸಿಕ್ಕಿ ಬಿದ್ದಿರುವ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಬ್ಬನಿಗಾಗಿ ಹುಡುಕಾಟ ನಡೆದಿದೆ. ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿನಿ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾಳೆ.












Click it and Unblock the Notifications