ಸೆ.8ರಂದು ತೇಜಸ್ವಿಯ ಮಾಯಾಮೃಗ ಪ್ರದರ್ಶನ

Mayamruga Kannada play in Bangalore
ಖ್ಯಾತ ಕಾದಂಬರಿಕಾರ ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನಾಚರಣೆ(ಸೆ.8)ಯಂದು ಬೆಂಗಳೂರಿನ ಹವ್ಯಾಸಿ ಕಲಾತಂಡ 'ವಟೀಕುಟೀರ' ಪೂಚಂತೇಯವರ 'ಮಾಯಾಮೃಗ' ಕಾದಂಬರಿ ಆಧಾರಿತ ನಾಟಕವನ್ನು ಹನುಮಂತನಗರದ ಕೆಎಚ್ ಕಲಾಸೌಧದಲ್ಲಿ ಸಂಜೆ 7.30ಕ್ಕೆ ಪ್ರದರ್ಶಿಸುತ್ತಿದೆ.

ದೆವ್ವ, ಭೂತಗಳೆಂಬ ಅತಿ ಸಹಜವಾದ ಪರಿಕಲ್ಪನೆಯ ಬಗ್ಗೆ ಅನೇಕ ಮಾತುಕತೆಗಳು ನಮ್ಮ ಬದುಕಿನಲ್ಲಿ ನಡೆಯುತ್ತಲೇ ಇರುತ್ತವೆ. ಮೆದುಳಿನ ಮೂಲೆಯಲ್ಲಿ ಕೂತಿರುವ ದೆವ್ವ-ಭೂತಗಳ ಕಲ್ಪನೆ ಮಾನವನ ಮನಸ್ಸಿನಲ್ಲಿ ಹೇಗೆ ಕೆಲಸ ಮೂಡುತ್ತದೆ ಎಂಬುದೇ ನಾಟಕದ ಸತ್ವ.

ಈ ನಾಟಕದ ಮೂಲಕ ಪ್ರೇಕ್ಷಕರಿಗೆ ಯಾವುದೇ ತತ್ವ ಸಿದ್ಧಾಂತಗಳನ್ನು ಹುಟ್ಟುಹಾಕುವುದಾಗಲೀ ಅಥವಾ ತೋರಿಸುವುದಾಗಲೀ ನಮ್ಮ ಉದ್ಧೇಶವಲ್ಲ ಎನ್ನುತ್ತಾರೆ ನಿರ್ದೇಶಕ ಪೃಥ್ವಿ ಆರಾಧ್ಯ. ಜೀವನದ ಘಟನೆಗಳನ್ನು ರಂಗದಮೇಲೆ ತೋರಿಸುವುದಷ್ಟೇ ನಮ್ಮ ಕೆಲಸ. ನಾಟಕದಲ್ಲಿ ರಂಗವಿನ್ಯಾಸ, ಬೆಳಕು ಮತ್ತು ಸಂಗೀತದ ಮೂಲಕ ಪ್ರೇಕ್ಷಕರಿಗೆ ವಿಚಿತ್ರ, ವಿಶಿಷ್ಟ ಅನುಭವಗಳು ಸಿಗುವಂತೆ ಮಾಡುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ಆರಾಧ್ಯ.

ಪಾತ್ರಧಾರಿಗಳಾಗಿ ಪ್ರದೀಪ್ ಬಿ.ವಿ., ಸುಜಯ್ ಶಾಸ್ತ್ರಿ, ಪ್ರವೀಣ್ ಬಿ.ವಿ., ವಿನಯ್ ಶಾಸ್ತ್ರಿ, ಭೂಪೇಶ ಬೆಳಗಲಿ, ಹರಿಪ್ರಸಾದ್, ಸತೀಶ್ ನಟಿಸಿದ್ದಾರೆ. ಬೆಳಕು ಮುಸ್ತಾಫ, ಸಂಗೀತ ರಾಜಗುರು ಹೊಸಕೋಟೆ, ವಿನ್ಯಾಸ ಸಂಘಟನೆ ಕಿರಣ್ ವಟಿ ಮತ್ತು ನಿರ್ದೇಶನ ಪೃಥ್ವಿ ಆರಾಧ್ಯ.

ಟಿಕೆಟ್ ಬೆಲೆ 100 ರು. ಟಿಕೆಟ್‌ಗಳಿಗಾಗಿ 98806 95659 ಸಂಪರ್ಕಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+