ಬಾಲಕಿಯ ಸಾಮೂಹಿಕ ಅತ್ಯಾಚಾರ: ಎಂಎಂಎಸ್ ಚಿತ್ರೀಕರಣ
ಮೀರತ್,
ಸೆ.4: ಉತ್ತರ ಪ್ರದೇಶದ ಮಾಯಾವತಿ ಲೋಕದಲ್ಲಿ ಮತ್ತೊಂದು ರೇಪ್ ಪ್ರಕರಣ ನಡೆದಿದೆ. 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಮೂವರು ದುಷ್ಕರ್ಮಿಗಳು ಗನ್ ತೋರಿಸಿ, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬೆದರಿಸಿ ಎಂಎಂಎಸ್ ಚಿತ್ರೀಕರಣವನ್ನೂ ಮಾಡಿದ್ದಾರೆ. id="toptextpromo">ಜಿಲ್ಲೆಯ
ದೌರಾಲಾದಲ್ಲಿ ಈ ಘಟನೆ ನಡೆದಿದೆ. ತನ್ನ ಸೋದರಿಯ ಜತೆ ಬಹಿರ್ದೆಸೆಗೆಂದು ತೆರಳಿದ್ದಾಗ 6ನೇ ತರಗತಿಯ ಬಾಲಕಿಯ ಮೇಲೆ ಈ ಹೇಯ ಕೃತ್ಯ ನಡೆದಿದೆ. ಜಾನಿ, ಸುಶೀಲ್ ಮತ್ತು ಗುಡ್ಡು ಬಾಲಕಿಯ ಮೇಲೆ ಲೈಂಗಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಾಲಕಿಯ
ಜತೆ ತೆರಳಿದ್ದ ಆಕೆಯ ಸೋದರಿ ಕೂಗಿಕೊಂಡಾಗ ಅತ್ಯಾಚಾರಿಗಳು ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಜಾನಿ ಎಂಬುವವನು ಎಂಎಂಎಸ್ ಚಿತ್ರೀಕರಣ ಮಾಡಿದ್ದಾನೆ. ತನಿಖೆ ಆಂಭಿಸಲಾಗಿದೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.











Click it and Unblock the Notifications