ವಿಮಾನ ಕಾಯುವಂತೆ ಮಾಡಿದ ಬೆಳಗಾವಿ 'ಕಿಂಗ್' ಎಂಪಿಗಳು

Prabhakar Kore and Suresh Angadi
ಬೆಳಗಾವಿ, ಆ. 30: ಇಬ್ಬರು ಬಿಜೆಪಿ ಸಂಸದರು ಬರುವುದು ತಡವಾದ್ದರಿಂದ ಬೆಳಗಾವಿ ಮುಂಬೈ ವಿಮಾನದಲ್ಲಿದ್ದ ಅಷ್ಟು ಮಂದಿ ಕಾಯಬೇಕಾದ ಪ್ರಸಂಗ ಸೋಮವಾರ ನಡೆದಿದೆ.

ಬೆಳಗಾವಿಯ ಸಂಸದ ಸುರೇಶ್ ಅಂಗಡಿ ಹಾಗೂ ರಾಜ್ಯ ಸಭಾ ಸದಸ್ಯ ಪ್ರಭಾಕರ್ ಕೋರೆ ಅವರಿಗಾಗಿ ಕಾದಿದ್ದ 4132 ಸಂಖ್ಯೆಯ ಕಿಂಗ್ ಫಿಷರ್ ವಿಮಾನ ನಿಗಿದಿತ ವೇಳೆಯಲ್ಲಿ ಟೇಕ್ ಆಫ್ ಆಗಲಿಲ್ಲ. ಐದು ನಿಮಿಷ ತಡವಾಗಿ ವಿಮಾನ ಏರಿದ ಇಬ್ಬರು ಸಂಸದರಿಗೆ ಎಲ್ಲಾ ಪ್ರಯಾಣಿಕರು ಒಟ್ಟಿಗೆ ಕೈ ತಟ್ಟಿ ಸ್ವಾಗತಿಸಿದ್ದಾರೆ. ಇದರಿಂದ ಇಬ್ಬರು ಸಂಸದರು ಮುಜಗರಕ್ಕೀಡಾದರು.

ನಾವೇನು ಕಂಪ್ಯೂಟರ್ ಗಳಲ್ಲ ಸಮಯಕ್ಕೆ ಸರಿಯಾಗಿ ಬರೋಕೆ ಆಗೋದಿಲ್ಲ. ಟ್ರಾಫಿಕ್ ಜಾಮ್ ಆಗಿರುತ್ತದೆ. ಜನ ಸ್ವಲ್ಪ ಅರ್ಥಮಾಡಿಕೊಳ್ಳಬೇಕು ಎಂದು ಐದು ನಿಮಿಷ ಅಷ್ಟೇ ತಡವಾಗಿರೋದು, ಈ ರೀತಿ ಆಗುತ್ತಿರುವುದು ಇದೇ ಮೊದಲು ಎಂದು ಪ್ರಭಾಕರ್ ಕೋರೆ ಅವರು ಪ್ರತಿಕ್ರಿಯಿಸಿದ್ದಾರೆ.

ಈ ಮಾಹಿತಿ ಹೊರ ಹಾಕಿದ್ದು ಮನಿಲೈಫ್ ನ ಸುಚೇತಾ ದಲಾಲ್. ಅವರು ತಮ್ಮ ಟ್ವೀಟ್ ನಲ್ಲಿ
"Kingfisher flight 4132 at Belgaum airport: captain announces flight is delayed because 2 MPs r on way to airport: THIS IS WHY WE NEED LOKPAL" ಬರೆದಿದ್ದರು.

ಮಿರರ್ ಪತ್ರಿಕೆ ಈ ಬಗ್ಗೆ ಆಸಕ್ತಿವಹಿಸಿ ದಲಾಲ್ ಅವರನ್ನು ಪ್ರಶ್ನಿಸಿದಾಗ 'ನಾನು ವಿಮಾನದಲ್ಲಿರಲಿಲ್ಲ.ಅದೇ ವಿಮಾನದಲ್ಲಿದ್ದ ನನ್ನ ಸ್ನೇಹಿತರು ಬೆಳಗಾವಿಯಿಂದ ಮುಂಬೈಗೆ ತೆರಳುತ್ತಿದ್ದರು. ಜೊತೆಗೆ ವಿಮಾನ ವಿಳಂಬವಾಗಿದ್ದನ್ನು ಕ್ಯಾಪ್ಟನ್ ಸಹ ಖಚಿತಪಡಿಸಿದ್ದಾರೆ. ಸಂಸದರು ಯಾರು ಎಂದು ಪ್ಯಾಸೆಂಜರ್ ಶೀಟ್ ತೆಗೆದು ನೋಡಿದಾಗ ಸುರೇಶ್ ಅಂಗಡಿ ಹಾಗೂ ಪ್ರಭಾಕರ್ ಕೋರೆ ತಡವಾಗಿ ಬಂದಿದ್ದು ದೃಢಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+