ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧ ಎದುರು ಸಂತೋಷ್‌ ಹೆಗ್ಡೆ ಪ್ರತಿಮೆ ಸ್ಥಾಪಿಸಿ

By Srinath
|
Google Oneindia Kannada News

santosh-hegde-statue-vidhan-soudha-bangarappa
ಬೆಂಗಳೂರು, ಆಗಸ್ಟ್ 26: ಅಕ್ರಮ ಗಣಿಗಾರಿಕೆ ಕುರಿತು ಸಮಗ್ರ ವರದಿ ನೀಡುವ ಮೂಲಕ ಭ್ರಷ್ಟರ ಬಣ್ಣ ಬಯಲು ಮಾಡಿದ ಮಾಜಿ ಲೋಕಾಯುಕ್ತ ನ್ಯಾ. ಎನ್‌. ಸಂತೋಷ್‌ ಹೆಗ್ಡೆ ಅವರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಆಗ್ರಹಿಸಿದ್ದಾರೆ.

ಸಂತೋಷ್‌ ಹೆಗ್ಡೆ ಅವರು ಲೋಕಾಯುಕ್ತರಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದು, ವಿಧಾನಸೌಧದ ಬಳಿ ಅವರ ಪ್ರತಿಮೆ ನೋಡುತ್ತಿದ್ದಂತೆ ಭ್ರಷ್ಟರಿಗೆ ನಡುಕ ಹುಟ್ಟಬೇಕು ಎಂದು ಅಭಿಪ್ರಾಯಪಟ್ಟರು. ಲೋಕಾಯುಕ್ತರಾಗಿ ಸರ್ಕಾರಕ್ಕೆ ಅನೇಕ ವರದಿಗಳನ್ನು ನೀಡಿದ್ದಾರೆ. ಆದರೆ ಅವುಗಳಲ್ಲಿ ಬಹುತೇಕ ವರದಿಗಳು ಮೂಲೆಗೆ ಸೇರಿವೆ ಎಂದು ವಿಷಾದಿಸಿದರು.

ಜನ ಲೋಕಪಾಲ ಮಸೂದೆ ಸಿದ್ಧಪಡಿಸುವ ಕಾರ್ಯದಲ್ಲಿಯೂ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಅವರಾದ ಸಂತೋಷ್‌ ಹೆಗ್ಡೆ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಈಗಿನ ಲೋಕಾಯುಕ್ತರಾದ ಶಿವರಾಜ ಪಾಟೀಲ್‌ ಅವರು ಸಹ ಸಂತೋಷ್‌ ಹೆಗ್ಡೆ ಅವರ ಕಾರ್ಯವೈಖರಿಯನ್ನು ಮುಂದುವರಿಸುವ ಮೂಲಕ ಭ್ರಷ್ಟರನ್ನು ಮಟ್ಟಹಾಕಬೇಕು ಎಂದೂ ಬಂಗಾರಪ್ಪ ಆಗ್ರಹಿಸಿದರು.

English summary
Former Chief Minister S Bangarappa has demanded to erect Justice Santosh Hegde statue in front of Vidhan Soudha as he has done a great service against corrupt politicians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X